ಮೈಸೂರು: ಲಯನ್ಸ್ ಕ್ಲಬ್ ಆಫ್ ಮೈಸೂರು ಎಲೈಟ್ ನ ಗವರ್ನರ್ ಅವರ ಅಧಿಕೃತ ಭೇಟಿ ಮತ್ತು ಚಾರ್ಟರ್ ನೈಟ್ ಸಂಭ್ರಮಾಚರಣೆ ವೇಳೆ ಮೈಸೂರಿನ ಸಾಧನ ಶ್ರೀ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ರಕ್ತದಾನಿ ಮಂಜು ಅವರನ್ನು
ವಿಶೇಷವಾಗಿ ಗೌರವಿಸಲಾಯಿತು.
ಮಂಜು ಅವರು ಸಾವಿರಾರು ಜನಕ್ಕೆ ರಕ್ತದಾನ ಮಾಡುವ ಮುಖಾಂತರ ಜೀವ ಉಳಿಸುವ ಸೇವೆಯನ್ನ ಮಾಡುತ್ತಾ ಬಂದಿದ್ದಾರೆ. ಜೊತೆಗೆ ಹಲವಾರು ರಂಗದಲ್ಲಿ ಅವರದೇ ಆದ ಸೇವೆಯನ್ನು ಸಮಾಜಕ್ಕೆ ನೀಡಿದ್ದಾರೆ.
ಕಲಾವಿದರಾಗಿ,ಗಾಯಕರಾಗಿ ಕಾರ್ಯಕ್ರಮಗಳನ್ನು ನೀಡುತ್ತಾ ಉಚಿತ ಆರೋಗ್ಯ ಶಿಬಿರಗಳನ್ನು ಮಾಡುತ್ತಾರೆ. ಪಿ ಜಿ ಆರ್ ಎಸ್ ಎಸ್ ನಿರಾಶ್ರಿತರು ಮತ್ತು ವೃದ್ಧರ ಬೃಂದಾವನದಲ್ಲಿ ತಾಯಂದಿರನ್ನು ನೋಡಿಕೊವ ಸೇವೆಯನ್ನೂ ಮಾಡುತ್ತಿದ್ದಾರೆ.
ಇದೆಲ್ಲವನ್ನು ಪರಿಗಣಿಸಿ ಸಂಸ್ಥೆಯಿಂದ ರಕ್ತದಾನಿ ಮಂಜು ಅವನ್ನು ಗೌರವಿಸಿ ನೆನಪಿನ ಕಾಣಿಕೆ ಮತ್ತು ಉಡುಗೊರೆ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಲಯನ್ ರಾಜಶೇಖರ ಕರ.ಎಲ್, ಲಯನ್ ವೆಂಕಟೇಶ ಟಿ.ಹೆಚ್,
ಲಯನ್ ಸುನೀಲ್ ಆರ್ ಎಸ್,
ಲಯನ್ ಚಂದ್ರಶೇಖರ್, ಲಯನ್ ಹೇಮಂತ್ ಕುಮಾರ್,
ಲಯನ್ ಸುರೇಶ ಬಿ.ಕೆ., ಅಭಿಜಿತ್ ಸಾರೋಲ್ಕರ್,ಲಯನ್ ಸುರೇಶ ಕೆ.ಎನ್
ಲಯನ್ ನಾಗಣ್ಣ, ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಟಿ ಎನ್ ದಾಸೇಗೌಡ ಮತ್ತು ಖಜಾಂಚಿ ಮೋಹನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
r
