ಕಾಂಗೋ: ಪೂರ್ವ ಕಾಂಗೋದಲ್ಲಿ ಎಬೋಲಾ ದಾಂಗುಡಿ ಇಟ್ಟಿದ್ದು,ಏಕಾಏಕಿ 131 ಮಂದಿ ಮೃತಪಟ್ಟಿದ್ದಾರೆ.
ಈಗಾಲೇ 500ಕ್ಕೂ ಹೆಚ್ಚು ಶಂಕಿತ ಪ್ರಕರಣಗಳು ವರದಿಯಾಗಿದ್ದು ಕೋವಿಡ್ ಮಾದರಿಯಲ್ಲೆ ಆತಂಕ ಮನೆ ಮಾಡಿದೆ.
ವಿಶ್ವ ಆರೋಗ್ಯ ಸಂಸ್ಥೆ ಅಂತಾರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದೆ.
ಕಾಂಗೋದ ಸಾರ್ವಜನಿಕ ಆರೋಗ್ಯ ಸಚಿವ ಸ್ಯಾಮ್ಯುಯೆಲ್ ರೋಜರ್ ಕಂಬಾ ಎಬೋಲಾ ಪೀಡಿತ ಪ್ರದೇಶಗಳಲ್ಲಿ 513 ಶಂಕಿತ ಪ್ರಕರಣಗಳು ವರದಿಯಾಗಿದ್ದು 131 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.
ಎಬೋಲಾ ಕಾಯಿಲೆಯ ಅಪರೂಪದ ತಳಿಯಾಗಿದ್ದು, ಯಾವುದೇ ಅನುಮೋದಿತ ಚಿಕಿತ್ಸೆಗಳು ಅಥವಾ ಲಸಿಕೆಗಳು ಲಭ್ಯವಿಲ್ಲ.
ಕಾಂಗೋ ಮತ್ತು ಉಗಾಂಡಾಗಳು 20ಕ್ಕೂ ಹೆಚ್ಚು ಎಬೋಲಾ ವೈರಸ್ ಕಾಡುತ್ತಿದೆ. ಅನು
ಇದು ಮೂರನೇ ಬಾರಿ ವೈರಸ್ ಪತ್ತೆಯಾಗಿದೆ. ಈಗ ಬುನಿಯಾ, ಗೋಮಾ, ಮೊಂಗ್ಬ್ವಾಲು, ಬುಟೆಂಬೊ ಮತ್ತು ನ್ಯಾಕುಂಡೆಯಲ್ಲಿ ಪ್ರಕರಣಗಳು ವರದಿಯಾಗಿವೆ.
ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಜಿನೀವಾದಲ್ಲಿ ಎಬೋಲಾ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
