ಮೈಸೂರು: ಮೈಸೂರಿನಲ್ಲಿ ಪಂಡಿತ್ ಕಪಿಲಾಚಾರ್ಯ ಗಲಗಲಿ ಅವರಿಗೆ ಹರಿದಾಸ ಸಂಗೀತ ಸಾಹಿತ್ಯೋತ್ಸವ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಮೈಸೂರಿನ ಕೃಷ್ಣಮೂರ್ತಿ ಪುರಂನಲ್ಲಿರುವ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ಹರಿದಾಸ ಸಂಗೀತ ಸಾಹಿತ್ಯೋತ್ಸವ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಗಾನ ಸಿರಿ ವೇದಾಂತ ಲಹರಿ ಭಾಗ 13 ಹರಿ ಮಧ್ವ ಪುರಂದರ ನಮನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪಂಡಿತ್ ಕಪಿಲಾಚಾರ್ಯ ಗಲಗಲಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಹರಿದಾಸ ಸಂಗೀತೋತ್ಸವ ಸಮಿತಿ ಅಧ್ಯಕ್ಷ ರವಿಕುಮಾರ್, ಕಾರ್ಯದರ್ಶಿ ಜಯಶ್ರೀ ರವಿಕುಮಾರ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕಾರ್ಯಕರ್ತರಾದ ಎಸ್ ಬಿ ವಾಸದೇವಮೂರ್ತಿ, ಭುಜಂಗ, ಲಯನ್ ಗುರುರಾಜ್,ಶಾರದಾ ವಿಲಾಸ್ ವಿದ್ಯಾ ಸಂಸ್ಥೆಯ ನರಸಿಂಹನ್, ಪುಟ್ಟಣ್ಣ ಭಟ್, ಪದ್ಮ ದ್ವಾರಕಿ ಮತ್ತಿತರರು ಹಾಜರಿದ್ದರು.
