ಮೈಸೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 133ನೇ ಮನ್ ಕಿ ಬಾತ್ ಕಾರ್ಯಕ್ರಮವನ್ನು ಮೈಸೂರಿನ ಲಿಂಗದೇವನ ಕೊಪ್ಪಲು ಸಿಲ್ವರ್ ಪಾಮ್ ಲೇಔಟ್ನಲ್ಲಿ ಸಮೃದ್ಧಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಮೋದಿಜೀ ಅವರು ದೇಶವಾಸಿಗಳ ಬಗ್ಗೆ ಇಟ್ಟಿರುವ ಕಾಳಜಿ, ಪ್ರೀತಿ ಹಾಗೂ ದೇಶದ ಸಾಧಕರನ್ನು ಹೆಮ್ಮೆಯಿಂದ ಪ್ರಸ್ತಾಪಿಸುವ ಶೈಲಿಯನ್ನು ಸಂಘದ ಸದಸ್ಯರು ಕೊಂಡಾಡಿದರು.
ಈ ಸಂದರ್ಭದಲ್ಲಿ ಮನ್ ಕೀ ಬಾತ್ ಜಿಲ್ಲಾ ಸಹ ಸಂಚಾಲಕರೂ ಹಾಗೂ ಬಿಜೆಪಿ ಜಿಲ್ಲಾ ಕಾರ್ಯದರ್ಶಿಗಳಾದ ಮೋನಿಕಾ ಎಂ ಅವರು ಪಾಲ್ಗೊಂಡಿದ್ದರು.
ಸಮೃದ್ಧಿ ಸ್ವಸಹಾಯ ಸಂಘದ ಸದಸ್ಯರಾದ ಸುಮ, ವಿಜಯಲಕ್ಷ್ಮಿ,ನೇತ್ರ , ಗೀತಾ, ಪವಿತ್ರ,ನವ್ಯ, ಕಲ್ಪನಾ, ಕುಸುಮ, ಗಂಗಮ್ಮ,ಬೇಬಿ, ಪಲ್ಲವಿ, ರಾಧಾ,ಶ್ವೇತಾ, ಶೈಲಜಾ ಉಪಸ್ಥಿತರಿದ್ದರು.
