ಮೈಸೂರು: ಮೈಸೂರಿನ ಪ್ರಥಮ ಮಹಿಳಾ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರ್ ಮತ್ತು ಅವರ ಸಿಬ್ಬಂದಿ ವರ್ಗದವರಿಗೆ ಕನ್ನಡ ಕ್ರಾಂತಿದಳ ಸಂಘಟನೆಯ ರಾಜ್ಯಾಧ್ಯಕ್ಷರಾದ ತೇಜಸ್ವಿ ನಾಗಲಿಂಗಸ್ವಾಮಿ ಅವರು ಅಭಿನಂದನೆ ಸಲ್ಲಿಸಿದ್ದಾರೆ,
ಸತತ ಮೂರನೇ ಬಾರಿಗೆ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಅತ್ಯಂತ ಯಶಸ್ವಿಯಾಗಿ ಮತ್ತು ಶಾಂತಿಯುತವಾಗಿ ನಿರ್ವಹಿಸುವಲ್ಲಿ ಸೀಮಾ ಲಾಟ್ಕರ್ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.
ಕೋಟ್ಯಂತರ ಜನರು ಸೇರುವ ಈ ಬೃಹತ್ ಉತ್ಸವದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸುರಕ್ಷತೆಯನ್ನು ಅಚ್ಚುಕಟ್ಟಾಗಿ ಕಾಪಾಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ.
ಮೈಸೂರು ನಗರದ ಇತಿಹಾಸದಲ್ಲೇ ಪ್ರಥಮ ಮಹಿಳಾ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ದಿನದಿಂದಲೂ ಸೀಮಾ ಲಾಟ್ಕರ್ ಅವರು ದಕ್ಷತೆ ಮತ್ತು ಕಠಿಣ ಪರಿಶ್ರಮಕ್ಕೆ ಹೆಸರಾಗಿದ್ದಾರೆ.
ದಸರಾ ಸಂದರ್ಭದಲ್ಲಿ ಲಕ್ಷಾಂತರ ಪ್ರವಾಸಿಗರು ಮತ್ತು ಸ್ಥಳೀಯರ ರಕ್ಷಣೆಗೆ ಅವರು ಕೈಗೊಂಡ ಮುಂಜಾಗ್ರತಾ ಕ್ರಮಗಳು ಹಾಗೂ ಟ್ರಾಫಿಕ್ ನಿರ್ವಹಣೆ ಶ್ಲಾಘನೀಯ.
ಸತತ ಮೂರು ವರ್ಷಗಳ ಕಾಲ ಯಾವುದೇ ಅಹಿತಕರ ಘಟನೆ ನಡೆಯದಂತೆ ದಸರಾವನ್ನು ಯಶಸ್ವಿಗೊಳಿಸಿದ ಅವರ ನಾಯಕತ್ವದ ಗುಣ ಮತ್ತು ಕರ್ತವ್ಯ ನಿಷ್ಠೆ ಇತರರಿಗೆ ಮಾದರಿಯಾಗಿದೆ.
ಕನ್ನಡ ಕ್ರಾಂತಿದಳ ಸಂಘಟನೆಯು ಅವರ ಈ ಸಾಧನೆಯನ್ನು ಹೆಮ್ಮೆಯಿಂದ ಗೌರವಿಸುತ್ತದೆ.
ಅವರ ದಕ್ಷ ಆಡಳಿತಾವಧಿಯಲ್ಲಿ ಮೈಸೂರು ನಗರವು ಮತ್ತಷ್ಟು ಸುರಕ್ಷಿತ ಮತ್ತು ಶಾಂತಿಯುತ ನಗರವಾಗಿ ಹೊರಹೊಮ್ಮಲಿ ಎಂದು ತೇಜಸ್ವಿ ಆಶಿಸಿದ್ದಾರೆ.
ಸಧ್ಯದಲ್ಲೇ ಕಮಿಷನರ್ ಅವರನ್ನು ಭೇಟಿ ಮಾಡಿ ಗೌರವಿಸಿ ಸನ್ಮಾನಿಸುವುದಾಗಿ ತೇಜಸ್ವಿ ನಾಗಲಿಂಗಸ್ವಾಮಿ ತಿಳಿಸಿದ್ದಾರೆ,
