ಹುಣಸೂರು: ಸಂವಿಧಾನ ಶಿಲ್ಪಿ ಧೀಮಂತ ನಾಯಕ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ 135ನೇ ಜಯಂತಿ ಪ್ರಯುಕ್ತ ಹುಣಸೂರಿನಲ್ಲಿ ಇದೇ ಪ್ರಥಮ ಬಾರಿಗೆ ಕುಸ್ತಿ ಉತ್ಸವ ಹಮ್ಮಿಕೊಳ್ಳಲಾಗಿದ್ದು ಕುಸ್ತಿಪಟುಗಳು ಸಂಭ್ರಮದಿಂದ ಪಾಲ್ಗೊಂಡರು.
ಅದರಲ್ಲೂ ಮಕ್ಕಳು ಕುಸ್ತಿ ಕಲಿತು ಉತ್ಸಾಹದಿಂದ ಸ್ಪರ್ಧೆಯಲ್ಲಿ ಭಾಗವಹಿಸಿ ಸಾರ್ವಜನಿಕರ ಗಮನ ಸೆಳೆದರು.
ಕುಸ್ತಿ ಪಂದ್ಯಾವಳಿ ಹುಣಸೂರು ಪಟ್ಟಣದ ಮುನೇಶ್ವರ ಕಾವಲ್ ಮೈದಾನದಲ್ಲಿ ನಡೆದಿದ್ದು ತಾಲೋಕಿನ ಜನತೆ ಪಾಲ್ಗೊಂಡು ಸಂಭ್ರಮಿಸಿದರು.
ಇಡೀ ಹುಣಸೂರು ತಾಲೂಕಿನ ಜನತೆ, ಎಲ್ಲಾ ಗ್ರಾಮಗಳ ಯಜಮಾನರು, ಮುಖಂಡರು, ಸಂಘ ಸಂಸ್ಥೆಗಳು, ಸರ್ಕಾರಿ ನೌಕರರು, ಜನಪ್ರತಿನಿಧಿಗಳು, ವಿವಿಧ ಪಕ್ಷಗಳ ಮುಖಂಡರು ಸೇರಿ ಅಂಬೇಡ್ಕರ್ ಜಯಂತಿ ಪ್ರಯುಕ್ತ ಈ ಕುಸ್ತಿ ಉತ್ಸವವನ್ನು ಹಮ್ಮಿಕೊಂಡಿದ್ದಾರೆ.
ಕುಸ್ತಿ ಪಂದ್ಯಾವಳಿಗೆ ಆಗಮಿಸುವವರಿಗೆ,ಅಭಿಮಾನಿಗಳಿಗೆ ಸಾರ್ವಜನಿಕರಿಗೆ ಯಾರಿಗೂ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ವತಿಯಿಂದ ಅನ್ನದಾನವನ್ನು ಹಮ್ಮಿಕೊಂಡಿದ್ದು ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಅವರ ನೇತೃತ್ವದಲ್ಲಿ
ಯಶಸ್ವಿಯಾಯಿತು.
ಹುಣಸೂರು ಶಾಸಕ ಜಿ.ಡಿ ಹರೀಶ್ ಗೌಡ, ಮಾಜಿ ಶಾಸಕ ಮಂಜುನಾಥ್,ಅಧಿಕಾರಿಗಳು ಸೇರಿದಂತೆ ಅನೇಕ ಗಣ್ಯರು ಆಗಮಿಸಿದ್ದರು.
