ಮೈಸೂರು: ಕೃತಕ ಬುದ್ಧಿಮತ್ತೆ ಜೀವನವನ್ನು ಹೆಚ್ಚು ಚತುರ,ವೇಗವಾದ ಮತ್ತು ಹೆಚ್ಚು ಪರಿಣಾಮಕಾರಿಯಾಗಿಸುವ ಯುಗದಲ್ಲಿ ನಾವಿದ್ದೇವೆ. ಅದು ಮೋಸವನ್ನೂ ಹಿಂದಿನಿಗಿಂತ ಹೆಚ್ಚು ನಂಬಿಕೆ ಮೂಡಿಸುವಂತೆ ಮಾಡಬಹುದು ಎಂದು ಸೈಬರ್ ಕ್ರೈಂ ಇನ್ಸ್ಪೆಕ್ಟರ್ ನಂದೀಶ್ ಕುಮಾರ್ ಅವರು ಹೇಳಿದರು.
ಇಂಟರ್ನೆಟ್ ದಿನ ಸ್ಮಾರ್ಟ್ ತಂತ್ರಜ್ಞಾನ, ಸುರಕ್ಷಿತ ಆಯ್ಕೆಗಳು,ಎಐ ಸುರಕ್ಷಿತ ಮತ್ತು ಜವಾಬ್ದಾರಿಯುತ ಬಳಕೆಯನ್ನು ಅನ್ವೇಷಿಸುವುದರ ಕುರಿತು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇನ್ಸ್ಟಾಗ್ರಾಮ್, ಫೇಸ್ ಬುಕ್ ನಂತಹ ಸೋಶಿಯಲ್ ಮೀಡಿಯಾ ಫ್ಲಾಟರ್ಮ್ ನಲ್ಲಿ ಕೂಡ ಅತಿ ಹೆಚ್ಚು ಜನರು ಮೋಸ ಹೋಗುತ್ತಿದ್ದಾರೆ.ಆದರಿಂದ ಜನರಿಗೆ ವಿವಿಧ ಕಾರ್ಯಕ್ರಮಗಳ ಮೂಲಕ ಸೈಬರ್ ಕ್ರೈಂ ಬಗ್ಗೆ ಶಾಲಾ ಮಟ್ಟದಿಂದಲೂ ಸೋಶಿಲ್ ಮೀಡಿಯಾ ಎಐ ಬಗ್ಗೆ ಮಾಹಿತಿಯನ್ನು ತಿಳಿಸಬೇಕು ಎಂದು ಅಭಿಪ್ರಾಯ ಪಟ್ಟರು.
ಸೋಶಿಲ್ ಮೀಡಿಯಾ ಫ್ಲಾಟರ್ಮ್ಸ್ನಲ್ಲಿ ಪರ್ಸನಲ್ ವಿಷಯಗಳನ್ನು ಹಂಚಿಕೊಳ್ಳಬಾರದು, ಎಐ ನಿಂದ ಇನ್ಸ್ಟಾಗ್ರಾಮ್ ನಲ್ಲಿ ಬರುವ ರೀಲ್ಸ್ ಗಳ ಮೂಲಕ ಲಿಂಕ್ ಗಳನ್ನು ಅತಿ ಹೆಚ್ಚು ಫಾರ್ ವರ್ಡ್ ಮಾಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಜಾಸ್ತಿ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ಲೇಸ್ಟೋರ್ ಮತ್ತು ಆಪ್ ಲ್ ಸ್ಟೋರ್ ಮೂಲಕ ಆಪ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಬೇಕು ಬೇರೆ ಇನ್ಯಾವುದೇ ಅಪ್ಲಿಕೇಶನ್ ಗಳಲ್ಲಿ ಅಪ್ ಡೌನ್ಲೋಡ್ ಮಾಡಬಾರದು ಎಂದು ತಿಳಿಹೇಳಿದರು.
ದೇಶದಲ್ಲಿ ಕಡಿಮೆ ಸೈಬರ್ ಕ್ರೈಂ ಅಪರಾಧದಲ್ಲಿ ತಮಿಳುನಾಡು ನಂಬರ್ 1ಸ್ಥಾನದಲ್ಲಿದೆ ಕರ್ನಾಟಕ 5 ನೇ ಸ್ಥಾನದಲ್ಲಿದೆ ಎಂದು ಹೇಳಿದರು.
ಮೈಸೂರು ನಗರದಲ್ಲಿ ಇತ್ತೀಚಿನ ದಿನಗಳಲ್ಲಿ 48 ಕೋಟಿ ವಂಚನೆಯಾಗಿದೆ, ಆದರಿಂದ ಯಾವುದೇ ಒಟಿಪಿ ಅಥವಾ ರಹಸ್ಯ ಮಾಹಿತಿಯನ್ನು ಎಂದಿಗೂ ಹಂಚಿಕೊಳ್ಳಬಾರದು.ಆನ್ಲೈನ್ನಲ್ಲಿ ಅತಿಯಾದ ಹಂಚಿಕೆಯನ್ನು ತಪ್ಪಿಸುವುದು,ಆ್ಯಪ್ಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಗೌಪ್ಯತಾ ಸೆಟ್ಟಿಂಗ್ ಗಳನ್ನು ಬಳಸಬೇಕು ಎಂದು ನಂದೀಶ್ ಕುಮಾರ್
ಸೂಚಿಸಿದರು.
ಸಹಾಯಕ ಪ್ರಧ್ಯಾಪಕಿ ಶಿಲ್ಪಾ ಅವರು ಮಾತನಾಡಿ ಇಂಟರ್ನೆಟ್ ಮತ್ತು ಅದರ ಸುರಕ್ಷಿತ, ಜವಾಬ್ದಾರಿಯುತ ಬಳಕೆಯ ಬಗ್ಗೆ ಬಳಕೆದಾರರನ್ನು ಜಾಗೃತಗೊಳಿಸಬೇಕು ಎಂದು ಹೇಳಿದರು.
ಪ್ರಮುಖ ಕೈಗಾರಿಕಾ ಸಂಶೋಧನಾ ಸಂಸ್ಥೆಯ ಅಧ್ಯಯನದ ಪ್ರಕಾರ, ಎಲ್ಲಾ ಸೈಬರ್ ದಾಳಿಗಳಲ್ಲಿ 90% ಮನುಷ್ಯರ ನಿರ್ಲಕ್ಷ್ಯದಿಂದಲೇ ಉಂಟಾಗುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಡಳಿತ ಉಪ ಕಾರ್ಯದರ್ಶಿ ಸವಿತ ಬಿ. ಎಂ, ಅಭಿವೃದ್ಧಿ ಉಪಕಾರ್ಯದರ್ಶಿ ಭೀಮಪ್ಪ, ಮುಖ್ಯ ಯೋಜನಾ ಅಧಿಕಾರಿ ಪ್ರಭುಸ್ವಾಮಿ ಕೆ.ಬಿ, ಮುಖ್ಯ ಲೆಕ್ಕಧಿಕಾರಿ ಸಿದ್ದಗಂಗಮ್ಮ, ಸೈಬರ್ ಕ್ರೈಂ ಇನ್ಸ್ಪೆಕ್ಟರ್ ಮಹೇಶ್, ಕುಮಾರ್, ತಾಲೂಕು ಮಟ್ಟದ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
