ಕೆನಡಾ: ಅತ್ತ ಥೈಲ್ಯಾಂಡ್ ನಲ್ಲಿನ ಶಾಲೆಯಲ್ಲಿ ಗುಂಡಿನ ದಾಳಿ ನಡೆದರೆ ಇತ್ತ
ಕೆನಡಾದ ಬ್ರಿಟಿಷ್ ಕೊಲಂಬಿಯಾದ ಶಾಲೆಯಲ್ಲೂ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ 10 ಮಂದಿಯನ್ನು ಬಲಿ ಪಡೆದಿದ್ದಾರೆ.
ಟಂಬ್ಲರ್ ರಿಡ್ಜ್ ಪಟ್ಟಣದಲ್ಲಿರುವ ಶಾಲೆಯಲ್ಲಿ ಅಪರಿಚಿತ ದುಷ್ಕರ್ಮಿ ಗುಂಡಿನ ದಾಳಿ ನಡೆಸಿದ್ದು, 10 ಮಂದಿ ಪ್ರಾಣ ಮೃತಪಟ್ಟಿದ್ದಾರೆ. 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಅಲ್ಲದೆ ಶಂಕಿತನೂ ಒಬ್ಬ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಮಾರು 24 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಂಬ್ಲರ್ ರಿಡ್ಜ್ ಮತ್ತು ಸುತ್ತಮುತ್ತಲಿನ ಮೊಬೈಲ್ ಫೋನ್ಗಳಿಗೆ ಕಳುಹಿಸಲಾದ ತುರ್ತು ಎಚ್ಚರಿಕೆಯಲ್ಲಿ ಶಂಕಿತರನ್ನು ಮಹಿಳೆ ಎಂದು ವಿವರಿಸಲಾಗಿದೆ. ನಿವಾಸಿಗಳು ಮನೆಯೊಳಗೆ ಉಳಿಯುವಂತೆ ಮತ್ತು ಆ ಪ್ರದೇಶಕ್ಕೆ ಹೋಗದಂತೆ ಮನವಿ ಮಾಡಲಾಗಿದೆ.
