ಮೈಸೂರು: ನಗರದ ಬಡಮಕಾನ್ ಪ್ರದೇಶದ ಬಳಿ ಹಸಿಗೂಸನ್ನು ಹೆಣ್ಣು ಎಂದೊ ಏನೊ ಪಾಪಿ ಪೋಷಕರು ಚರಂಡಿಗೆ ಎಸೆದು ಹೋದ ಹೇಯ ಪ್ರಕರಣ ನಡೆದಿದೆ.
ಬಡಮಕಾನ್ ಪ್ರದೇಶದ ಚರಂಡಿಯಲ್ಲಿ ಮಗು ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಗಾಬರಿಯಿಂದ 112 ಪೊಲೀಸ್ ತುರ್ತು ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಮಾಹಿತಿ ಸಿಕ್ಕ ಕೂಡಲೇ ಎನ್.ಆರ್. ಪೊಲೀಸರು ಸ್ಥಳಕ್ಕೆ ದಾವಿಸಿ ಮಗುವನ್ನು ಚರಂಡಿಯಿಂದ ಹೊರಗೆ ಜಾಗರೂಕತೆಯಿಂದ ತೆಗೆದು ಪ್ರಥಮ ಚಿಕಿತ್ಸೆ ಕೊಡಿಸಿ ರಕ್ಷಿಸಿದ್ದಾರೆ.
ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಆರೈಕೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನವಜಾತ ಶಿಶುವನ್ನು ಎಸೆದ ಆರೋಪಿಗಳ ಪತ್ತೆಗೆ ಎನ್.ಆರ್. ಠಾಣೆ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಮಗುವನ್ನು ತ್ಯಜಿಸಿದ ಪೋಷಕರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಹೆಣ್ಣು ಮಗು ಎಂದು ಹೀಗೆ ಹಸುಕಂದನನ್ನು ಅಮಾನವೀಯವಾಗಿ ಎಸೆದು ಹೋಗಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
