ಮೈಸೂರು: ಕರ್ನಾಟಕದ ಹೆಮ್ಮೆಯ ಫ್ರಾಂಚೈಸಿ ಕ್ರಿಕೆಟ್ ತಂಡ ಮೈಸೂರು ವಾರಿಯರ್ಸ್, ಶ್ರೇಷ್ಠತೆ ಮತ್ತು ಕ್ರೀಡಾ ಮನೋಭಾವದ ಪರಂಪರೆ ಮುಂದುವರಿಸಿ, ಟ್ಯಾಲೆಂಟ್ ಹಂಟ್ ಮೂಲಕ 10 ಪ್ರತಿಭಾವಂತ ಆಟಗಾರರನ್ನು ತಂಡಕ್ಕೆ ಸೇರ್ಪಡೆಗೊಳಿಸಿದೆ.
ಮುಂಬರುವ ಋತುವಿನಲ್ಲಿ ಉತ್ಸಾಹಭರಿತ ಪ್ರದರ್ಶನ ಮತ್ತು ನವೀಕೃತ ಶಕ್ತಿಯೊಂದಿಗೆ ರಾಜ್ಯಾದ್ಯಂತ ಕ್ರಿಕೆಟ್ ಉತ್ಸಾಹಿಗಳನ್ನು ತೊಡಗಿಸಿಕೊಳ್ಳಲು ತಂಡ ಸಜ್ಜಾಗಿದೆ. ಯುವ ಆಟಗಾರರ ಸೇರ್ಪಡೆಯಿಂದ ತಂಡದ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ವಿಭಾಗಗಳಿಗೆ ಮತ್ತಷ್ಟು ಬಲ ಬಂದಂತಾಗಿದೆ ಎಂದು ತಂಡದ ಮೂಲಗಳು ತಿಳಿಸಿವೆ.
ಹೊಸ ಆಟಗಾರರು ಮುಂದಿನ ದಿನಗಳಲ್ಲಿ ತಂಡದ ಹಿರಿಯ ಆಟಗಾರರೊಂದಿಗೆ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದು, ಫಿಟ್ನೆಸ್ ಮತ್ತು ಕೌಶಲ್ಯ ವೃದ್ಧಿಗೆ ಒತ್ತು ನೀಡಲಾಗುತ್ತದೆ.
ಟ್ಯಾಲೆಂಟ್ ಹಂಟ್ನಲ್ಲಿ ನೂರಾರು ಆಟಗಾರರು ಭಾಗವಹಿಸಿದ್ದು, ಅಂತಿಮವಾಗಿ 10 ಅತ್ಯುತ್ತಮ ಪ್ರತಿಭೆಗಳನ್ನು ಆಯ್ಕೆ ಮಾಡಲಾಗಿದೆ.
ಟ್ಯಾಲೆಂಟ್ ಹಂಟ್ನಿಂದ ಆಯ್ಕೆಯಾದ ಆಟಗಾರರು,
ಮನೋಜ್ ರಮೇಶ್
ಜಯಂತ್ ಎಂ ಆರ್
ಶಶಾಂಕ್ ಎಚ್ ಸಿ
ಗೌತಮ್ ಸಾಗರ್
ರಾಘವೇಂದ್ರ ಎಂ ವಿ
ಮೇಧಾಂಶ್ ಅರಸ್
ಭುವನೇಶ್ ಪಿ ನಾಯಕ್
ಲಂಕೇಶ್ ಕೆ ಎಸ್
ಹರ್ಷವರ್ಧನ್
ಚಮನ್ ನಿಖಿಲ್ .
ಈ ಆಯ್ಕೆಯಿಂದ ರಾಜ್ಯದ ಮೂಲೆ ಮೂಲೆಗಳಲ್ಲಿರುವ ಪ್ರತಿಭಾವಂತ ಕ್ರಿಕೆಟಿಗರಿಗೆ ದೊಡ್ಡ ವೇದಿಕೆ ಸಿಕ್ಕಂತಾಗಿದೆ.
