ಮೈಸೂರು: ಮೈಸೂರು ವ್ಯಾಪ್ತಿಯ ಎಲ್ಲಾ ಪ್ರದೇಶಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಸೇರಿದಂತೆ ಪೆಟ್ರೋಲಿಯಂ ಉತ್ಪನ್ನಗಳು ಸಮರ್ಪಕವಾಗಿ ಲಭ್ಯವಿದೆ ಯಾವುದೇ ಕೊರತೆ ಇಲ್ಲ ಎಂದು ಮೈಸೂರು ಪೆಟ್ರೋಲಿಯಂ ವ್ಯಾಪಾರಿಗಳ ಒಕ್ಕೂಟದ
ವರು ಸ್ಪಷ್ಟವಾಗಿ ಹೇಳಿದ್ದಾರೆ.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮೈಸೂರು ಪೆಟ್ರೋಲಿಯಂ ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷರಾದ ಶಶಿಕಲಾ ನಾಗರಾಜ್ ಅವರು ಮಾತನಾಡಿದರು.
ನಮಗೆ ಭಾರತ ಸರ್ಕಾರ, ಪೆಟ್ರೋಲಿಯಂ ಮತ್ತು ಪ್ರಕೃತಿ ಆನಿಲ ಸಚಿವಾಲಯ ಹಾಗೂ ಎಲ್ಲಾ ಆಯಿಲ್ ಮಾರ್ಕೆಟಿಂಗ್ ಕಂಪನಿಗಳಿಂದ ಸಂಪೂರ್ಣ ಸಹಕಾರ ಮತ್ತು ನಿರಂತರ ಪೂರೈಕೆ ದೊರೆಯುತ್ತಿದೆ.ಹಾಗಾಗಿ ಎಲ್ಲಾ ಪೆಟ್ರೋಲ್ ಬಂಕ್ ಗಳಲ್ಲಿ ಸರಾಗವಾಗಿ ಇಂಧನ ಲಭ್ಯವಾಗುತ್ತಿದೆ ಸುಮ್ಮನೆ ಕ್ಯೂನಲ್ಲಿ ನಿಂತು ಶ್ರಮ ಪಡಬೇಡಿ ಎಂದು ತಿಳಿಸಿದರು.
ನಮ್ಮ ಡೀಲರ್ಗಳ ಸಂಘವು ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ನಿರಂತರವಾಗಿ ಶ್ರಮಿಸುತ್ತಿದ್ದು, ಅಗತ್ಯ ಸೇವೆಯನ್ನು ಒದಗಿಸಲು ಬದ್ಧವಾಗಿದೆ ಎಂದು ಹೇಳಿದರು.
ಅಗತ್ಯ ಸೇವೆ ಒದಗಿಸುತ್ತಿರುವುದರಿಂದ ಸಾರ್ವಜನಿಕರು ಅವಸರದಲ್ಲಿ ಇಂಧನ ಖರೀದಿ ಮಾಡುವುದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದರು.
ಇಂಧನವನ್ನು ಅನಾವಶ್ಯಕವಾಗಿ ಸಂಗ್ರಹಿಸಿಟ್ಟುಕೊಳ್ಳುವುದು ಕಾನೂನು ಬಾಹಿರವಾಗಿದೆ.
ಅಸುರಕ್ಷಿತ ಪಾತ್ರೆಗಳಲ್ಲಿ ಇಂಧನವನ್ನು ಸಂಗ್ರಹಿಸುವುದು ದೊಡ್ಡ ಅಗ್ನಿ ಅಪಾಯಕ್ಕೆ ಕಾರಣವಾಗಬಹುದು ಆದ್ದರಿಂದ ಜನರು ಶಾಂತವಾಗಿರಿ ಮತ್ತು ಸಹಕರಿಸಿ ಇಂಧನ ಪೂರೈಕೆ ಸಾಮಾನ್ಯವಾಗಿ ಮತ್ತು ನಿರಂತರವಾಗಿ ನಡೆಯುತ್ತಿದೆ ಎಂದು ಶಶಿಕಲಾ ಅವರು ತಿಳಿಸಿದರು.
ನಮ್ಮ ಒಕ್ಕೂಟ ಹಾಗೂ ಎಲ್ಲಾ ಡೀಲರ್ಗಳು ಸಮಾಜದ ಸುರಕ್ಷತೆ ಮತ್ತು ಸೇವೆಗೆ ಬದ್ಧರಾಗಿದ್ದಾರೆ ಎಂದು ಅವರು ಹೇಳಿದರು.
