ನೈಜೀರಿಯಾ: ನೈಜೀರಿಯಾದ ದಕ್ಷಿಣ ಒಂಡೋ ರಾಜ್ಯದಲ್ಲಿ ಮಿಲಿಟರಿ ವಿಮಾನ ಅಪಘಾತಕ್ಕೀಡಾಗಿ 25 ಮಂದಿ ಮೃತಪಟ್ಟಿದ್ದಾರೆ.
ನಂತರ ಅಧ್ಯಕ್ಷ ಬೋಲಾ ಟಿನುಬು ಮೂರು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದ್ದಾರೆ.
ಸೋಮವಾರ ವಿಮಾನಯಾನ ಸಚಿವ ಫೆಸ್ಟಸ್ ಕೆಯಾಮೊ 32 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದರು ಆದರೆ ಮಂಗಳವಾರ ವಾಯುಪಡೆಯು ಐದು ಸಿಬ್ಬಂದಿ ಮತ್ತು 20 ಪ್ರಯಾಣಿಕರು ಸೇರಿ
25 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದೆ.
ಸೋಮವಾರ ಬೆಳಿಗ್ಗೆ ಬೆನಿನ್ ನಗರದಿಂದ ಲಾಗೋಸ್ಗೆ ದಿನನಿತ್ಯದಂತೆ ಕಾರ್ಯಾಚರಣೆಯಲ್ಲಿದ್ದಾಗ ವಿಮಾನವು ನೌಕಾ ನೆಲೆಯ ಬಳಿಯ ಜೌಗು ಪ್ರದೇಶದಲ್ಲಿ ಪತನಗೊಂಡಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
1992 ರ ನಂತರ ನೈಜೀರಿಯಾದ ಮಿಲಿಟರಿ ವಿಮಾನವೊಂದು ಅಪಘಾತಕ್ಕೀಡಾದ ಅತ್ಯಂತ ಭೀಕರ ಅಪಘಾತ ಇದಾಗಿದೆ.
ನೈಜೀರಿಯಾ ಅಧ್ಯಕ್ಷ ಬೋಲಾ ಟಿನುಬು ಮೂರು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದ್ದಾರೆ.
ಟಿನುಬು ಅವರು ಹತ್ಯೆಗೀಡಾದವರಿಗೆ ಸಂತಾಪ ಸೂಚಿಸಿದ್ದಾರೆ ಮತ್ತು ಸಂಪೂರ್ಣ ತನಿಖೆಗೆ ಆದೇಶಿಸಿದ್ದಾರೆ ಅಲ್ಲದೆ
ಮಡಿದವರಿಗೆ ಗೌರವ ಸಲ್ಲಿಸುವ ಸಲುವಾಗಿ ದೇಶಾದ್ಯಂತ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸುವಂತೆ ಆದೇಶಿಸಿದ್ದಾರೆ.
ನಮ್ಮ ವಾಯುಪಡೆಯ ಸಿಬ್ಬಂದಿ ನೈಜೀರಿಯಾವನ್ನು ಸುರಕ್ಷಿತವಾಗಿಡಲು ಪ್ರತಿದಿನ ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಾರೆ. ಅವರ ತ್ಯಾಗವನ್ನು ಎಂದಿಗೂ ಮರೆಯಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
