ಪಿರಿಯಾಪಟ್ಟಣ: ಹೊಸ ಗೊಬ್ಬರದ ಅಂಗಡಿಗಳಲ್ಲಿ ಕಳಪೆ ಗೊಬ್ಬರ ಕೊಡಲಾಗುತ್ತಿದೆ ಮತ್ತು ಚೌಕಾಸಿ ವ್ಯಾಪಾರ ಮಾಡಲಾಗುತ್ತಿದೆ ಎಂದು ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಆರ್ ಮಂಜುನಾಥ್, ರಾಜ್ಯ ಯುವ ಘಟಕದ ಅಧ್ಯಕ್ಷ ಕೋಮಲಾಪುರ ಸ್ವಾಮಿಗೌಡರು ದೂರಿದರು.
ಪಿರಿಯಾಪಟ್ಟಣ ತಾಲೂಕು ದಿಂಡಗಾಡು ಗ್ರಾಮದಲ್ಲಿ ರೈತ ಸಂಘ ಮತ್ತು ಹಾಸಿರು ಸೇನೆ ಉದ್ಘಾಟನೆ ಅವರು ಮಾತನಾಡಿದರು.
ಕೃಷಿ ಇಲಾಖೆಗಳಲ್ಲಿ ಸರ್ಕಾರಿ ಸವಲತ್ತುಗಳು ರೈತರಿಗೆ ತಲುಪುತ್ತಿಲ್ಲ ಇದರ ಬಗ್ಗೆ ಗಮನ ಹರಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸುರೇಶ್ ಬಿಗಹಳ್ಳಿ, ಉಪಾಧ್ಯಕ್ಷರು, ಪಿ.ಎಂ ಮಾದೇವ್ ತಾಲೂಕು ಯುವ ಘಟಕದ ಅಧ್ಯಕ್ಷರು, ಕೊಣಸೂರ್ ಶಿವರಾಜ್ ತಾಲೂಕು ಸಂಚಾಲಕರು, ರಾಜ್ಯ ಸದಸ್ಯರು ದೇವ ಶೆಟ್ಟಿ, ಕಾರ್ಯದರ್ಶಿ ಯೋಗಣ್ಣ ಬೆಟ್ಟದಪುರ ಇನ್ನಿತರರು ಹಾಜರಿದ್ದರು
