ಹುಣಸೂರು: ಪಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಣೆ ಮಾಡಿಲಾಗಿದ್ದು,ಈ ಹಕ್ಕು ಪತ್ರಳಿಗೆ ಸಂಬಂಧಿಸಿದ ನಿವೇಶನಗಳಿಗೆ ಹುಣಸೂರು ನಗರಸಭೆಯಲ್ಲಿ ಖಾತೆ ದಾಖಲುಮಾಡಿ ಸ್ಥಳ ಗುರುತಿಸಿ ನಿದೇಶನಗಳನ್ನು ಸ್ವಾದೀನಕ್ಕೆ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಹುಣಸೂರು ತಾಲೋಕು ನಾಗರೀಕ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಗರಸಭೆ ಬಳಿ ಪ್ರತಿಭಟನೆ ನಡೆಯಿತು.
ಹುಣಸೂರು ನಗರದ ನಿವೇಶನ ರಹಿತ ಮತ್ತು ಹಿಂದುಳಿದ ದುರ್ಬಲ ವರ್ಗದ ನಿವಾಸಿಗಳಿಗೆ 2004-05ನೇ ಸಾಲಿನಲ್ಲಿ ಆಶ್ರಯ ಸಮಿತಿ ವತಿಯಿಂದ 870 ಪಲಾನುಬವಿಗಳಿಗೆ ಹಕ್ಕು
ಪತ್ರಗಳನ್ನು ವಿತರಣೆ ಮಾಡಿಲಾಗಿದೆ.
ಹುಣಸೂರು ಪಟ್ಟಣದಲ್ಲಿ ನಿವೇಶನ ರಹಿತ ಹಿಂದುಳಿದ ಮತ್ತು ದುರ್ಬಲ ವರ್ಗದವರಿಗೆ ಆಶ್ರಯ ಸಮಿತಿ ವತಿಯಿಂದ 1991-92ನೇ ಸಾಲಿನಲ್ಲಿ ಹುಣಸೂರು ಪಟ್ಟಣದ ಮಂಜುನಾಥ ಬಡಾವಣೆ ಮತ್ತು ಒಂಟಿಪಾಳ್ಯ ಬೋರೆಯಲ್ಲಿ ಖಾಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು.
ಇದಾದ ನಂತರ 2002-03ನೇ ಸಾಲಿನಲ್ಲಿ ಮಾಜಿ ಶಾಸಕ ದಿವಂಗತ.ವಿ.ಪಾಪಣ್ಣ ಅವರು ಹುಣಸೂರು ಪಟ್ಟಣದಲ್ಲಿ ನಿವೇಶನ ರಹಿತ ಹಿಂದುಳಿದ ಮತ್ತು ದುರ್ಬಲ ವರ್ಗದ ನಿವಾಸಿಗಳಿಗೆ ಆಶ್ರಯ ಸಮಿತಿಯ ವತಿಯಿಂದ ರತ್ನಪುರಿ ರಸ್ತೆಯಲ್ಲಿ 870 ಪಲಾನುಭವಿಗಳನ್ನು ಗುರ್ತಿಸಿ ಜಿಲ್ಲಾಧಿಕಾರಿಯವರಿಂದ ಅನುಮೂದನೆ ಪಡೆದು ತಹಸಿಲ್ದಾರ್ ಮುಖಾಂತರ 2004-05ನೇ ಸಾಲಿನಲ್ಲಿ ಆಶ್ರಯ ಸಮಿತಿಯ ವತಿಯಿಂದ 870 ಪಲಾನುಭವಿಗಳಿಗೆ ಖಾಲಿ ನಿವೇಶನಗಳ ಹಕ್ಕು ಪತ್ರಗಳನ್ನು ವಿತರಣೆ ಮಾಡಿಸಿದ್ದರು.
ಆದರೆ 2004-05ನೇ ಸಾಲಿನಿಂದ 2025-26ನೇ ಸಾಲಿನ ತನಕ ಅಂದರೆ 22 ವರ್ಷಗಳು ಕಳೆದರೂ ಸಹ ಆಗಿನ ಹುಣಸೂರು ಪುರಸಭೆ ಮತ್ತು ಇಂದಿನ ಹುಣಸೂರು ನಗರಸಭೆಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿಯಿಂದ ಪಲಾನುಭವಿಗಳು ಪಡೆದಿರುವ ಹಕ್ಕು ಪತ್ರಗಳಿಗೆ ಖಾತೆ ದಾಖಲುಮಾಡಿ ಸ್ಥಳ ಗುರುತಿಸಿ ನಿವೇಶನಗಳನ್ನು ಸ್ವಾಧೀನ ನೀಡಿರುವುದಿಲ್ಲ ಎಂದು ಪ್ರತಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.
ಸಂಬಂಧ ಪಟ್ಟ ನಿವೇಶನ ರಹಿತ ಹಿಂದುಳಿದ ಮತ್ತು ದುರ್ಬಲ ವರ್ಗದವರಿಗೆ ಅನ್ಯಾಯವಾಗಿದೆ. ಆದ ಕಾರಣ ಹುಣಸೂರು ನಗರದ ನಿವೇಶನ ರಹಿತ ಮತ್ತು ಹಿಂದುಳಿದ ದುರ್ಬಲ ವರ್ಗದ ನಿವಾಸಿಗಳಿಗೆ 2004-05ನೇ ಸಾಲಿನಲ್ಲಿ ಆಶ್ರಯ ಸಮಿತಿಯ ವತಿಯಿಂದ 870 ಪಲಾನುಬವಿಗಳಿಗೆ ನೀಡಿರುವ ಹಕ್ಕು ಪತ್ರಗಳಿಗೆ ಸಂಬಂಧಿಸಿದ ನಿವೇಶನಗಳಿಗೆ ಹುಣಸೂರು ನಗರಸಭೆಯಲ್ಲಿ ಖಾತೆ ದಾಖಲು ಮಾಡಿ, ಸ್ಥಳ ಗುರುತಿಸಿ ಖಾಲಿ ನಿವೇಶನಗಳನ್ನು ಸ್ವಾದೀನಕ್ಕೆ ನೀಡಬೇಕೆಂದು ಪದಾಧಿಕಾರಿಗಳು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಅಧ್ಯಕ್ಷ ಸ್ವಾಮಿ ಗೌಡ,ಉಪಾಧ್ಯಕ್ಷ ಇಂಟಕ್ ರಾಜು ಎನ್, ಕಾರ್ಯದರ್ಶಿ ಹೆಚ್.ಕೆ.ಸುರೇಶ್,ಸಹ ಕಾರ್ಯದರ್ಶಿ ಸನಾವುಲ್ಲಾ,ಖಜಾಂಚಿ ವೆಂಕಟೇಶ್.,ಸಂಚಾಲಕರಾದಎಸ್. ಶ್ರೀನಿವಾಸ್.ಕೆ.ಎಸ್. ಸೋಮಶೇಕರ್ ಸತೀಶ್, ನಿರ್ದೇಶಕರಾದ ಹೆಚ್.ಆರ್.ಚಿದಾನಂದ, ಹೆಚ್, ವೈ ಕೃಷ್ಣ, ಸಂಪತ್ ಕುಮಾರ್, ಚೇಕಬ್, ಯೋಗಾನಂದ, ಕುಮಾರ್, ಕಲ್ಕುಣಿಕೆ, ವಿಷಕಂಠಮೂರ್ತಿ, ಮಹದೇವ, ಸುರೇಶ, ಸಣ್ಣಯ್ಯ, ಜಗದೀಶ, ಆಟೋ, ಪರಶುರಾಮು, ಎಂ.ಶಿವಕುಮಾರ್,ಗೋಪಿ, ರಮೇಶನಾಯಕ, ಮಹೇಶ ಡಿ, ಸುರೇಶ ತಿಟ್ಟು, ಸಲೀಮ್, ಮಹೇಶ,ಎಸ್, ಸಂತೋಷ್,ಲಕ್ಷಣ, ಶಿವಣ್ಣೀಗೌಡ, ಪಾಪನಾಯಕ, ಗಿರೀಶ್, ಶೇಷಾದ್ರಿ, ಮಂಜು ಮತ್ತಿತರರು ಪಾಲ್ಗೊಂಡಿದ್ದರು.
