(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೊಳ್ಳೇಗಾಲ ಘಟಕದಲ್ಲಿ ಬಸವೇಶ್ವರ ಜಯಂತಿ ಆಚರಿಸಲಾಯಿತು.
ಘಟಕದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಚಾಮರಾಜನಗರ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜು ಅವರು ಮಹನೀಯರ ಜಯಂತಿಗಳು ಒಂದು ದಿನಕ್ಕೆ ಸೀಮಿತವಾಗದೆ ಅವರ ಆದರ್ಶ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಆಳವಡಿಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
ಬಸವಣ್ಣನವರು ಅನುಭವ ಮಂಟಪದ ಮೂಲಕ ಸರ್ವರಿಗೂ ಸಮಾನತೆ, ಸಹೋದರತೆ, ಸಹಬಾಳ್ವೆ, ಕಾಯಕ ನಿಷ್ಠೆಯ ಆದರ್ಶಗಳನ್ನು ಜಗಕ್ಕೆ ಸಾರಿದ್ದಾರೆ. ಇಂತಹ ದಾರ್ಶನಿಕ ಮಹನೀಯರ ತತ್ವ ಆದರ್ಶಗಳನ್ನು ನಾವು ಪಾಲಿಸಿದಾಗ ಮಾತ್ರ ಅವರಿಗೆ ಗೌರವ ಸಲ್ಲಿಸಲು ಸಾಧ್ಯ ಎಂದು ಹೇಳಿದರು.
ಕೊಳ್ಳೇಗಾಲ ಘಟಕ ವ್ಯವಸ್ಥಾಪಕ ಭೋಗನಾಯಕ ಮಾತನಾಡಿ ಬಸವಣ್ಣನವರ ಆದರ್ಶಗಳ ಬಗ್ಗೆ ಮಾತನಾಡುವ ನಾವು ನಂತರ ಮರೆಯುತ್ತೇವೆ. ಸ್ವಾರ್ಥ ಮತ್ತು ನಾನು ಮೇಲು ಎಂಬ ನಾನತ್ವಗಳನ್ನು ಮೈಗೂಡಿಸಿಕೊಳ್ಳದೆ ಬಸವಣ್ಣರವರ ಸಮಾಜ ಸುಧಾರಣೆ ಆಗುವ ನಿಟ್ಟಿನಲ್ಲಿ ಕಾಯಕವೇ ಕೈಲಾಸ ಎಂಬ ತತ್ವದೊಂದಿಗೆ ನೀವು ನಡೆಯಿರಿ ಅದನ್ನು ನೋಡಿ ನಮ್ಮ ಮುಂದಿನ ಪೀಳಿಗೆ ಕಲಿಯುತ್ತದೆ. ಇಂದು ನಾವು ನಮ್ಮ ಮಕ್ಕಳ ಮುಂದೆ ಏನು ಮಾಡುತ್ತೇವೆ ಅದನ್ನೆ ಅವರು ಸಹ ಅನುಸರಿಸುತ್ತಾರೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ನಿರೂಪಣೆಯನ್ನು ನಿರ್ವಹರಾದ ಡಿ. ರಂಗಸ್ವಾಮಿಯವರು ಅಚ್ಚುಕಟ್ಟಾಗಿ ನಡೆಸಿಕೊಟ್ಟರು
ಈ ಸಂದರ್ಭದಲ್ಲಿ ಚಾಮರಾಜನಗರ ವಿಭಾಗೀಯ ಆಡಳಿತಾಧಿಕಾರಿ ಬಸವರಾಜು, ತಾಂತ್ರಿಕ ಶಿಲ್ಪಿ ರಘು, ಲೆಕ್ಕಾಧಿಕಾರಿ ರುದ್ರಮುನಿ, ಸಹಾಯಕ ಭದ್ರತಾ ನಿರೀಕ್ಷಕ ನಾಗೇಂದ್ರ, ಮೇಲ್ವಿಚಾರಕ ಪ್ರವೀಣ್, ಕೊಳ್ಳೇಗಾಲ ಘಟಕದ ಪಾರುಪತ್ತೆಗಾರ ಪರಮೇಶ್ವರ್, ಸಹಾಯಕ ಕಾರ್ಯಾಧಿಕ್ಷಕ ಉಮೇಶ್, ಸಹಾಯಕ ಸಂಚಾರ ನಿರೀಕ್ಷಕ ಸತೀಶ್ ಚಂದ್ರಬಾಬು, ಸಂಚಾರ ನಿಯಂತ್ರಕ ರಾಜಣ್ಣ, ಮಂಜುನಾಥ್, ಚರಣ್, ಹಾಗೂ ನೌಕರರಾದ ನಂಜುಂಡಸ್ವಾಮಿ, ಶಿವಪ್ರಸಾದ್, ಮಧುಚಂದ್ರ, ರಾಜಶೇಖರ್, ದೇವರಾಜ್, ಜಗದೀಶ್, ಧರಣಿ, ಸಿದ್ದಪ್ಪ, ನಾಗೇಂದ್ರ, ರಮೇಶ್ ಸರ್ಕಾರ್, ಸಿದ್ದಲಿಂಗಪ್ಪ, ಮೆಕಾನಿಕ್ ಚಂದ್ರು
ಹಾಗೂ ಸಿಬ್ಬಂದಿ ಉಪಸ್ಥಿರಿದ್ದರು.
.
