ಮೈಸೂರು: ಮಹಾತ್ಮ ಗಾಂಧೀಜಿ ಅವರ ತತ್ವ ಮತ್ತು ಆದರ್ಶಗಳು ಭೂಮಿ ಇರುವವರೆಗೂ ಜೀವಂತವಾಗಿ ಉಳಿಯುತ್ತವೆ ಎಂದು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಪ್ರಾಂಶುಪಾಲ ಡಾ. ಅಬ್ದುಲ್ ರಹಿಮಾನ್ ಎಂ ಅವರು ಹೇಳಿದರು.
ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಹುತಾತ್ಮರ ದಿನಾಚರಣೆ ವೇಳೆ ಅವರು ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿ ಅವರ ತತ್ವ ಮತ್ತು ಆದರ್ಶಗಳ ಕುರಿತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಗಾಂಧೀಜಿಯವರು ಗತಿಸಿದ ದಿನವನ್ನು ಹುತ್ತಾತ್ಮ ದಿನವೆಂದು ಪರಿಗಣಿಸುತ್ತೇವೆ, ಆದರೆ ಅವರು ದೈಹಿಕವಾಗಿ ನಮ್ಮೊಡನೆ ಇಲ್ಲ.ಬದಲಿಗೆ ದೇಶದ ಜನಮಾನಸದಲ್ಲಿ ಒಂದಲ್ಲ ಒಂದು ರೀತಿ ಅಡಕವಾಗಿದ್ದಾರೆ ಎಂದು ಹೇಳಿದರು.
ಶಾಂತಿ, ಸಹಬಾಳ್ವೆ,ಸಹಿಷ್ಣುತೆ, ಪರಸ್ಪರ ಗೌರವ, ಲಿಂಗಸಮಾನತೆ ಮತ್ತು ಸಾಮಾಜಿಕ ಸಮತೋಲನವನ್ನು ಪ್ರತಿಪಾದಿಸಿದ ಮಹಾತ್ಮನ ಅಕಾಲಿಕ ಮರಣ ದೇಶಕ್ಕೆ ತುಂಬಲಾರದ ನಷ್ಟ. ಆದರೂ ಅವರ ತತ್ವ ಮತ್ತು ಆದರ್ಶಗಳು ಕ್ರೌರ್ಯ ಮತ್ತು ದೌರ್ಜನ್ಯ ಹೆಚ್ಚಾಗುತ್ತಿರುವ ಈ ಕಾಲದಲ್ಲಿ ಅವರ ಆದರ್ಶಗಳು ಜೀವಂತವಾಗಿ ಇರಿಸಿವೆ
ಎಂದು ತಿಳಿಸಿದರು.
ಮಹಾತ್ಮ ಗಾಂಧೀಜಿಯವರ ಸರಳತೆಯೇ ನಮ್ಮೆಲ್ಲರಿಗೂ ಬಹುದೊಡ್ಡ ಸಂದೇಶ. ಹಾಗಾಗಿ ಸರಳ ಜೀವನವನ್ನು ನಡೆಸುತ್ತಾ ಗಾಂಧೀಜಿಯವರು ಹೇಳಿಕೊಟ್ಟ ಆದರ್ಶಗಳನ್ನು ಮೈಗೂಡಿಸಿಕೊಂಡು,ಪ್ರತಿನಿತ್ಯ ಪಾಲಿಸುತ್ತಾ ಸಮಾಜವನ್ನು ಒಳ್ಳೆಯ ದಿಕ್ಕಿನಲ್ಲಿ ಕೊಂಡೊಯ್ಯಬೇಕಾದದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ಡಾ. ಅಬ್ದುಲ್ ರಹಿಮಾನ್ ಹೇಳಿದರು.
ಈ ವೇಳೆ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಮಾಡಿ, ಮೌನಚರಣೆ ಮೂಲಕ ಸಮರ್ಪಣೆ ಮಾಡಲಾಯಿತು.
ಸಾಂಸ್ಕೃತಿಕ ಸಮಿತಿ ಸಂಚಾಲಕ ಗೋವಿಂದರಾಜು ಸ್ವಾಗತಿಸಿ ವಂದಿಸಿದರು.
ದೈಹಿಕ ಶಿಕ್ಷಣ ನಿರ್ಧೇಶಕಿ ಪ್ರತಿಮ ಕೆ ಆರ್, ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿಗಳಾದ ಲಕ್ಷ್ಮಣ ಬಿ, ಶುಭ, ಪತ್ರಾಂಕಿತ ವ್ಯವಸ್ಥಾಪಕಿ ಮೀನಾಕ್ಷಿ ಆರ್, ಅಧ್ಯಾಪಕ ಕಾರ್ಯದರ್ಶಿ ರಮೇಶ ಕೆ ಎಲ್, ಅಧ್ಯಾಪಕರಾದ ತೋಯಜಾಕ್ಷ, ಕಾವೇರಿ, ಮಲ್ಲಿಕಾರ್ಜುನ, ರಾಜೇಶ್ವರಿ,ದಿನೇಶ, ಮಾನಸ, ಲತಾ, ಅಂಬಿಕಾ, ಮಂಜುನಾಥ್, ಪ್ರತೀಕ್, ಮಂಜು,ಮಹೇಶ್ ಹಾಗು ಎಲ್ಲಾ ವಿಭಾಗದ ಮುಖ್ಯಸ್ಥರು, ಅಧ್ಯಾಪಕರು, ಅಧ್ಯಾಪಕೇತರರು ವಿದ್ಯಾರ್ಥಿಗಳು ಹಾಜರಿದ್ದರು.
