ಮೈಸೂರು: ಮೈಸೂರಿನಿಂದ ಗೋವಾ ಪ್ರವಾಸಕ್ಕೆ ಹೋಗಿದ್ದ ವೇಳೆ ವೈದ್ಯರೊಬ್ಬರ ಮನೆಯಲ್ಲಿ ಕಳ್ಳರು 7 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 20 ಸಾವಿರ ನಗದು ದೋಚಿದ ಘಟನೆ ನಡೆದಿದೆ.
ಈ ಸಂಭಂಧ ಡಾ.ಸಿದ್ದರಾಮು ಅವರು ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮಾನಸಿನಗರದಲ್ಲಿ ವಾಸವಿರುವ ಡಾ.ಸಿದ್ದರಾಮು ಮೇ 9 ರಂದು ಗೋವಾ ಪ್ರವಾಸ ಗೋಗಿದ್ದರು.
ಅವರು ಮೇ 11 ರಂದು ಪ್ರವಾಸದಿಂದ ಹಿಂದಿರುಗಿದ್ದಾರೆ. ಕಳ್ಳರು ಟೆರೇಸ್ ಬಾಗಿಲನ್ನ ಮೀಟಿ ಪ್ರವೇಶಿಸಿ 7 ಲಕ್ಷ ಮೌಲ್ಯದ 127 ಗ್ರಾಂ ಚಿನ್ನಾಭರಣ ಹಾಗೂ ಲಾಕರ್ ನಲ್ಲಿದ್ದ 20 ಸಾವಿರ ನಗದು ದೋಚಿದ್ದಾರೆ.
ಆಲನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
