ಮೈಸೂರು: ಮೈಸೂರಿನ ಬಸ್ ನಿಲ್ದಾಣದಲ್ಲಿ ಕೆ ಎಂ ಪಿ ಕೆ ಟ್ರಸ್ಟ್ ನಿಂದ
ಪ್ರಯಾಣಿಕರಿಗೆ ಎಸ್ಐಆರ್ ಕುರಿತು ಜಾಗೃತಿ
ಮೂಡಿಸಲಾಯಿತು.
ಭಾರತದ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆಯ ಕುರಿತು ಮಂಗಳವಾರ ಕೆ ಎಮ್ ಪಿ ಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ
ನಗರದ ಬಸ್ ನಿಲ್ದಾಣದಲ್ಲಿ
ಜಾಗೃತಿಯ ಕರಪತ್ರ ಹಿಡಿದು
ಎಸ್ ಐ ಆರ್ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆಎಮ್ಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ್ ಅಯ್ಯಂಗಾರ್,
ನೀವುಗಳು ನಿಮ್ಮ ಮನೆಗಳಲ್ಲಿ ಬಿ ಎಲ್ ಒ ಗಳು ಬಂದ ಸಂದರ್ಭದಲ್ಲಿ
ಸೂಕ್ತ ದಾಖಲೆಗಳೊಂದಿಗೆ ಅವರಿಗೆ ಸ್ಪಂದಿಸಿ ಮತದಾನದ ಹಕ್ಕನ್ನು ಪಡೆಯಬೇಕು ಎಂದು ಸಲಹೆ ನೀಡಿದರು.
ಎಸ್ಐಆರ್ ದೇಶದ ಪ್ರಜೆ ಹೌದು ಅಲ್ಲವೋ ಎಂಬುದನ್ನು ತೀರ್ಮಾನ ಮಾಡುವ ಒಂದು ಪ್ರಕ್ರಿಯೆ, ನಾವೆಲ್ಲರೂ ಸೇರಿ ಇದನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ರಾಷ್ಟ್ರದ ಹಿತದೃಷ್ಟಿಯಿಂದ
ಮಾಡುವ ಕಾರ್ಯ ಇದಾಗಿದೆ ,
ಯಾವುದೇ ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿ ಕೈಬಿಡದಂತೆ ಕ್ರಮವಹಿಸಬೇಕು
ಎಸ್ಐಆರ್ ಪ್ರಕ್ರಿಯೆಯಲ್ಲಿ ಯಾವುದೇ ಪಕ್ಷದ ಬಿ ಎಲ್ ಒ ರಾಜಕೀಯ ಮಾಡುವಂತಿಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪವಿತ್ರವಾಗಿದೆ ಎಂದು ವಿವರಿಸಿ,ಜಾಗೃತಿ ಮೂಡಿಸಿದರು
ಎಸ್ಐಆರ್ ಜಾಗೃತಿ ವೇಳೆ ಎಸ್ ಎನ್ ರಾಜೇಶ್, ಚಕ್ರಪಾಣಿ, ಮಹಾನ್ ಶ್ರೇಯಸ್, ಸುಚೀಂದ್ರ, ಜಗದೀಶ್, ದೂರ ರಾಜಣ್ಣ, ದಯಾನಂದ ನಾಯಕ್, ರವಿ, ರಾಕೇಶ್, ದುರ್ಗಾ ಪ್ರಸಾದ್, ಮತ್ತಿತರರು ಸಾಥ್ ನೀಡಿದರು.
