ಮೈಸೂರು: ಮೈಸೂರಿನ ಅರಿವು ಸಂಸ್ಥೆ ವತಿಯಿಂದ ಚಾಮುಂಡಿಪುರಂ ಸುತ್ತಮುತ್ತ ವ್ಯಾಪರಸ್ಥರು ಹಾಗೂ ಗ್ರಾಹಕರಿಗೆ ಪ್ಲಾಸ್ಟಿಕ್ ಬ್ಯಾಗ್ ತ್ಯಜಿಸಿ ಪೇಪರ್ ಬ್ಯಾಗ್ ಉಪಯೋಗಿಸಿ ಎಂದು ತಿಳುವಳಿಕೆ ಮಂಡಿಸಲಾಯಿತು.
ಸಾರ್ವಜನಿಕರಿಗೆ ಪೇಪರ್ ಬ್ಯಾಗ್ ವಿತರಿಸಿ ಪ್ಲಾಸ್ಟಿಕ್ ಬ್ಯಾಗ್ ಬದಲಿಗೆ ಪೇಪರ್ ಬ್ಯಾಗ್ ಬಳಸು ವಂತೆ ಮನವಿ ಮಾಡಿ
ಜಾಗೃತಿ ಮೂಡಿಸಲಾಯಿತು.
ಈ ವೇಳೆ ಮಾತನಾಡಿದ ಅರಿವು ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ್ ಕಶ್ಯಪ್,
ಇಂದಿನ ಜನಜೀವನಕ್ಕೆ ಹಾಗೂ ನಮ್ಮ ವ್ಯಾವಹಾರಕ್ಕೆ ಬ್ಯಾಗ್ ಗಳು ಹಾಗೂ ಚೀಲಗಳು ಬಹಳ ಅವಶ್ಯಕ,ಇದು ನಿಜವೂ ಹೌದು.ಆದರೆ ಪರಿಸರ ಹಿತಕ್ಕಾಗಿ ನಮ್ಮ ಪರಿಸರವನ್ನು ಉಳಿಸಲು
ಪ್ಲಾಸ್ಟಿಕ್ ಮುಕ್ತ ದೇಶವನ್ನಾಗಿ ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ದಿನನಿತ್ಯದ ಜೀವನಕ್ಕೆ ಪೇಪರ್ ಬ್ಯಾಗ್ ಗಳನ್ನೇ ಬಳಸಿ ವಾಯು ಮಾಲಿನ್ಯವನ್ನು ತಡೆಗಟ್ಟಲು ನಿಮ್ಮ ಜವಾಬ್ದಾರಿ ಬಹಳಷ್ಟಿದೆ ಇದಕ್ಕೆ ಎಲ್ಲರೂ ಕೈಜೋಡಿಸೋಣ ನಮ್ಮ ಪರಿಸರವನ್ನು ಉಳಿಸೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಅಪೂರ್ವ ಸ್ನೇಹ ಬಳಗದ ಅಧ್ಯಕ್ಷ ಅಪೂರ್ವ ಸುರೇಶ್,ಗೌರಿಶಂಕರ ನಗರದ ಶಿವು, ದೂರ ರಾಜಣ್ಣ, ಆನಂದ್, ಜತ್ತಿ ಪ್ರಸಾದ್, ಶಿವಲಿಂಗ ಸ್ವಾಮಿ, ಪುರುಷೋತ್ತಮ್, ನಿವೃತ್ತ ಶಿಕ್ಷಕ ಮಹದೇವಸ್ವಾಮಿ ಮತ್ತಿತರರು ಹಾಜರಿದ್ದರು.,
