ಗದಗ (ಮುಂಡರಗಿ): ಆತ್ಮ ಯೋಜನೆ 2025-26 ರ ಕೃಷಿ ಇಲಾಖೆ ಮುಂಡರಗಿ ಇವರು ಕೊಡ ಮಾಡುವ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಹಳ್ಳಿಯೊಂದರ ಮಹಿಳೆ ಭಾಜನರಾಗಿ ಗಮನ ಸೆಳೆದಿದ್ದಾರೆ.
ತಾಲೂಕಿನ ಜಾಲವಾಡಗಿ ಗ್ರಾಮದ ಹಿರಿಯ ಕೃಷಿಕ ಮಹಿಳೆ ಶಾಂತವ್ವ ಶೇ ತಳವಾರ ಅವರು ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ತಾಲೂಕು ಆಡಳಿತದಿಂದ ನಡೆದ 77 ನೇ ಗಣರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಸಾಧಕರಾದ ಶಾಂತವ್ವ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
