ಮೈಸೂರು: ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಅವರ ಸೇವೆ ಸ್ಮರಿಸುವ ಮೂಲಕ ಮೈಸೂರಿನಲ್ಲಿ ಕಾರ್ಯಪ್ಪ ಅವರ 127ನೇ ಜನ್ಮದಿನವನ್ನು ಆಚರಿಸಲಾಯಿತು.
ಚಾಮುಂಡೇಶ್ವರಿ ಯುವ ಬಳಗದವರು ಮೈಸೂರಿನ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ವೃತ್ತದಲ್ಲಿರುವ ಕಾರ್ಯಪ್ಪ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ನಂತರ ಸಿಹಿ ವಿತರಿಸುವ ಮೂಲಕ ಜನುಮ ದಿನಾಚರಣೆ ಆಚರಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್,ಅಖಿಲ ಕರ್ನಾಟಕ ಸಿದ್ದರಾಮಯ್ಯ ಬ್ರಿಗೇಡ್ ಅಧ್ಯಕ್ಷ ಹಿನಕಲ್ ಉದಯ್, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಆರಿಫ್ ಪಾಷಾ,ಡೈರಿ ವೆಂಕಟೇಶ್, ಎಸ್ ಎನ್ ರಾಜೇಶ್,ಜಿ ರಾಘವೇಂದ್ರ, ದಿನೇಶ್, ಕೋದಂಡ, ಬಲರಾಮ, ಶ್ರೀ ಕನಕ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ರವಿಚಂದ್ರ, ವಿನಯ್ ಕುಮಾರ್ ಮತ್ತಿತರರು ಹಾಜರಿದ್ದರು.
