ಯಾದಗಿರಿ: ತಾನು ಹೆತ್ತ ಮಗಳನ್ನೇ ಪಾಪಿ ತಾಯಿ ಕತ್ತು ಹಿಸುಕಿ ಕೊಲೆ ಮಾಡಿರುವ ಹೇಯ ಘಟನೆ ಯಾದಗಿರಿಯ ರಾಜೀವ್ ಗಾಂಧಿ ನಗರದಲ್ಲಿ ನಡೆದಿದೆ.
ಪ್ರತಿಭಾ ಎಂಬ 11 ವರ್ಷದ ಮಗಳನ್ನು ಆಕೆಯ ತಾಯಿ ನಿರ್ಮಲಾ ಮಲ್ಲಯ್ಯ ಬೀಳಾರ್ ಸಾಯಿಸಿದ್ದಾಳೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಆಕೆಗೆ ಮದ್ಯ ಸೇವಿಸುವ ಅಭ್ಯಾಸವಿತ್ತು. ಸೋಮವಾರ ಆರೋಪಿ ನಿರ್ಮಲಾ ಮದ್ಯ ಸೇವಿಸಿ ಮನೆಗೆ ಬಂದಿದ್ದಳು. ಇದನ್ನು ನೋಡಿದ ಮಗಳು ಪ್ರಶ್ನಿಸಿದ್ದಾಳೆ.
ಇದಿಂದ ಕೋಪಗೊಂಡ ಆಕೆ ಮಗಳ ಕತ್ತು ಹಿಸುಕಿದ್ದಾಳೆ.ಉಸಿರು ಗಟ್ಟಿ ಪ್ರತಿಭಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.ಪೊಲೀಸರ ತನಿಖೆಯಿಂದ ಸತ್ಯ ಗೊತ್ತಾಗಬೇಕಿದೆ.
ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ನಿರ್ಮಲಾ ಳನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ.
