ಕೊಳ್ಳೇಗಾಲ: ಜೂನ್ 17 ರ ಬುಧವಾರ ಕುಂತೂರು ವಿ.ವಿ. ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ತ್ರೈಮಾಸಿಕ ಕಾರ್ಯ ಹಮ್ಮಿಕೊಂಡಿದ್ದು ಈ ವಿದ್ಯುತ್ ಕೇಂದ್ರದಿಂದ ವಿದ್ಯುತ್ ಸರಬರಾಜು ಪಡೆಯುತ್ತಿರುವ
ಕೊಳ್ಳೇಗಾಲ ಹಾಗೂ ಯಳಂದೂರು ತಾಲ್ಲೂಕಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
66/11 ಕೆ.ವಿ ವಿ.ವಿ. ಕೇಂದ್ರ ಕುಂತೂರಿನಿಂದ ಹೊರಹೊಮ್ಮುವ 11ಕೆವಿ ಫೀಡರ್ಗಳಾದ ಟಗರಪುರ ಎನ್.ಜೆ.ವೈ, ಕೆಸ್ತೂರು ಎನ್.ಜೆ.ವೈ, ಕಲಿಯೂರು ಎನ್.ಜೆ.ವೈ, ತೇಂಬಳ್ಳಿ ಐ.ಪಿ, ಹೊಸಮಾಲಂಗಿ ಮೆಲ್ಲಹಳ್ಳಿ ಐ.ಪಿ, ಬೆಟ್ಟದ ಹೊಸೂರು ಐ.ಪಿ, ಫೀಡರ್ಗಳಿಗೆ ವಿದ್ಯುತ್ ನಿಲುಗಡೆ ಮಾಡುವುದರಿಂದ ಈ ಫೀಡರ್ಗಳಿಗೆ ಒಳಪಡುವ ಗ್ರಾಮಗಳಾದ ಕುಂತೂರು, ಚಿಲಕವಾಡಿ, ಟಗರಪುರ, ಆಲಹಳ್ಳಿ, ಮಲ್ಲಳ್ಳಿಮಾಳ, ಕಜ್ಜಿಹುಂಡಿ, ಹೊಸಮಾಲಂಗಿ, ಸಿಲ್ಕಲ್ಪುರ, ಕುಂತೂರು ಮೋಳೆ, ಎಡಮೋಳೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ನಾಳೆ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ.
ಹಾಗೇಯೇ ಇದೇ ವಿದ್ಯುತ್ ಕೇಂದ್ರದಿಂದ ವಿದ್ಯುತ್ ಸರಬರಾಜು ಪಡೆಯುತ್ತಿರುವ ಯಳಂದೂರು ತಾಲ್ಲೂಕಿನ ಕೆಸ್ತೂರು, ಕೆ.ಹೊಸೂರು, ಮಲ್ಲಿಗೆಹಳ್ಳಿ, ಬಸವಾಪುರ, ಕಿನಕಹಳ್ಳಿ, ಕಟ್ಟವಾಡಿ, ಗ್ರಾಮಗಳಿಗೂ ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ.
ಈ ಕುರಿತು ಚಾವಿಸನಿನಿ, ಕೊಳ್ಳೇಗಾಲ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ), ಎಂ ಸುರೇಶ್ ಕುಮಾರ್ ಹಾಗೂ ಯಳಂದೂರು ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ), ಲಿಂಗರಾಜು ಅವರು ಎಂದಿನಂತೆ ಗ್ರಾಹಕರು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಜೊತೆ ಸಹಕರಿಸಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.
