ಮೈಸೂರು: ಮೈಸೂರಿನ ಹಿಂದೂ ಜಾಗರಣ ವೇದಿಕೆ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ನಮನ ಸಲ್ಲಿಸಲಾಯಿತು.
ಕೆ.ಆರ್. ಮೊಹಲ್ಲಾದ ತೊಗರಿ ಬೀದಿಯಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಗಾರರಾದ ಶಹೀದ್ ಭಗತ್ ಸಿಂಗ್, ವೀರ ಸಾವರ್ಕರ್, ಸಂಗೊಳ್ಳಿ ರಾಯಣ್ಣ, ನೇತಾಜಿ ಸುಭಾಷ್ ಚಂದ್ರ ಬೋಸ್ ಸೇರಿದಂತೆ ಅನೇಕ ಮಹಾಪುರುಷರನ್ನು ಸ್ಮರಿಸಿ ಭಾರತ ಮಾತೆಗೆ ಪುಷ್ಪ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕೃಷ್ಣರಾಜ ಕ್ಷೇತ್ರದ ತೊಗರಿ ಬೀದಿ 51ನೇ ವಾರ್ಡಿನ ಮುಖಂಡರಾದ ರವಿ, ದೀಪಕ್, ಉಮೇಶ್, ದಿನೇಶ್, ಮಹಿಳಾ ಮುಖಂಡರಾದ ದೀಪಾ, ಪುಷ್ಪ, ವರಲಕ್ಷ್ಮಿ ಹಾಗೂ ಮೊಹಲ್ಲಾದ ಅನೇಕ ನಿವಾಸಿಗಳು ಭಾಗವಹಿಸಿದ್ದರು.
ಈ ವೇಳೆ ಮುಖಂಡ ರವಿ ಅವರು ಮಾತನಾಡಿ,ದೇಶಕ್ಕಾಗಿ ತ್ಯಾಗ ಮತ್ತು ಬಲಿದಾನ ಮಾಡಿದ ಮಹನೀಯರನ್ನು ಕೇವಲ ಸ್ಮರಿಸಿದರಷ್ಟೆ ಸಾಲದು; ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ದೇಶಭಕ್ತಿ, ಸಾಮಾಜಿಕ ಸೇವೆ ಮತ್ತು ರಾಷ್ಟ್ರೀಯ ಏಕತೆಯನ್ನು ಬೆಳೆಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ ಎಂದು ಹೇಳಿದರು.
ಯುವಜನತೆ ಮಹಾಪುರುಷರ ಜೀವನದಿಂದ ಸ್ಫೂರ್ತಿ ಪಡೆದು ಸದೃಢ, ಸ್ವಾಭಿಮಾನಿ ಹಾಗೂ ಸಂಸ್ಕಾರಯುತ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
