ಕೇರಳ: ಕೇರಳದ ಕುಂಭ ಮೇಳವೆಂದೆ ದೇಶದಲ್ಲೆಡೆ ಗಮನ ಸೆಳೆದ ಮಲಪುರಂ ಜಿಲ್ಲೆಯ ತಿರುವನಾಯ ಕ್ಷೇತ್ರದಲ್ಲಿ ಭಾರತ್ ಪೂಂಜ ನದಿ ದಡದಲ್ಲಿರುವ ಬ್ರಹ್ಮ ವಿಷ್ಣು ಮಹೇಶ್ವರರ ಸಂಗಮ ಕ್ಷೇತ್ರದ ಕುಂಭಮೇಳದಲ್ಲಿ ಮೈಸೂರಿನ ಕೆ ಎಂ ಪಿ ಕೆ ಚಾರಿಟೇಬಲ್ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಬಿಜೆಪಿ ಮುಖಂಡರು ಪಾಲ್ಗೊಂಡರು.
ಅಲ್ಪಾವಧಿಯಲ್ಲಿ ಸಂಯೋಜನೆಗೊಂಡು ಭಾರಿ ಸಂಖ್ಯೆಯ ಜನರನ್ನು ಆಕರ್ಷಿಸುತ್ತಿರುವ ಕೇರಳದ ಕುಂಭಮೇಳ ಪ್ರತಿನಿತ್ಯ ನಡೆಯುತ್ತಿರುವ ಪೂಜೆ ಪುನಸ್ಕಾರಗಳಿಂದ ಪುಣ್ಯಭೂಮಿಯಾಗಿದೆ.
ಈ ವೇಳೆ ಬಿಜೆಪಿ ಮುಖಂಡರಾದ ಕೇಬಲ್ ಮಹೇಶ್ ಮಾತನಾಡಿ,ಶ್ರೀ ಮಾತಾ ಅಮೃತಾನಂದಮಯಿ ಆಶ್ರಮದ ಆಶ್ರಯದಲ್ಲಿ ನಡೆಯುತ್ತಿರುವ ಈ ಕುಂಭಮೇಳದಲ್ಲಿ ದೇಶದಲ್ಲಿನ ಸಾಧು ಸಂತರು,ಆಚಾರ್ಯರು, ಹಿಂದೂಪರ ಚಿಂತಕರು ಪಾಲ್ಗೊಂಡು ಮಲಪುರಂ ಜಿಲ್ಲೆಯ ಈ ಪ್ರದೇಶ ಕಾಲ, ಧರ್ಮ, ವಿಜಯದ ನವಪಲ್ಲಟಕ್ಕೆ ಮುನ್ನುಡಿ ಬರೆದಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ದೂರ ರಾಜಣ್ಣ, ಗೌರಿಶಂಕರ ಸ್ವಾಮಿ, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್ ಮತ್ತಿತರರು ಪೂಜೆಯಲ್ಲಿ ಭಾಗಿಯಾಗಿದ್ದರು.
