ಮೈಸೂರು: ಕಾಡಿನ ಹಸಿರೆ ನಾಡಿನ ಉಸಿರು ಎಂದು ಬಣ್ಣಿಸಿದ ಮಾವುತ ಚಲನಚಿತ್ರದ ನಾಯಕ ನಟ ಲಕ್ಷ್ಮಿಪತಿ ಬಾಲಾಜಿ ಅವರು, ಇತ್ತೀಚಿನ ವರ್ಷಗಳಲ್ಲಿ ಕಾಡುಗಳನ್ನು ಕಡಿದು ರೆಸಾರ್ಟ್ ಇನ್ನಿತರ ಚಟುವಟಿಕೆ ಮಾಡುತ್ತಿರುವುದರಿಂದ ಅರಣ್ಯ ಸಂಪತ್ತು ನಾಶವಾಗುತ್ತಿದೆ ಎಂದು ವಿಷಾದಿಸಿದರು.
ಮೈಸೂರಿನ ಎಂ ಜಿ ರಸ್ತೆಯಲ್ಲಿರುವ ಜೆಎಸ್ಎಸ್ ಸಂಸ್ಥೆಯವರ ಸಾಹುಕಾರ್ ಸಿದ್ದಲಿಂಗಯ್ಯನವರ ವೇದ ಶಾಸ್ತ್ರ ಜ್ಯೋತಿಷ್ಯ ಪಾಠಶಾಲೆಯ ವಿದ್ಯಾರ್ಥಿ ಬಂಧುಗಳಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ಪರಿಸರ ಜಾಗೃತಿ, ಸೇವಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಟ ಲಕ್ಷ್ಮಿಪತಿ ಬಾಲಾಜಿ ಹಾಗೂ ಅವರ ತಂಡ ವಿದ್ಯಾರ್ಥಿಗಳಿಗೆ ಡ್ರೈ ಫ್ರೂಟ್ಸ್,ಹಣ್ಣು ಹಂಪಲು ವಿತರಿಸಿ ಪರಿಸರ ಜಾಗೃತಿ ಮೂಡಿಸಿ ಮಾತನಾಡಿದರು.
ಕಾಡನ್ನು ರಕ್ಷಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ.ವಿದ್ಯಾರ್ಥಿಗಳು ತಮ್ಮ ಹಾಗೂ ಕುಟುಂಬದವರ ಜನ್ಮದಿನ ಹಾಗೂ ವಿಶೇಷ ಸಂದರ್ಭಗಳಲ್ಲಿ ಸಸಿಗಳನ್ನು ನೆಡುವ ಮೂಲಕ ಪರಿಸರ ಹಚ್ಚ ಹಸಿರಾಗಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಜೆಡಿಎಸ್ ಕಾರ್ಯಾಧ್ಯಕ್ಷ ಪ್ರಕಾಶ್ ಪ್ರಿಯದರ್ಶನ್ ಮಾತನಾಡಿ,
ವಿದ್ಯೆ ಎಂಬುದು ಬದುಕಿನ ಬಹುದೊಡ್ಡ ಆಸ್ತಿ. ಪ್ರತಿಯೊಬ್ಬ ವಿದ್ಯಾರ್ಥಿಯು ಓದಿನ ಸಮಯದಲ್ಲಿ ಚೆನ್ನಾಗಿ ಓದಿ ವಿದ್ಯಾವಂತರಾಗಿ ತಂದೆ ತಾಯಿಗೆ ಕೀರ್ತಿ ತರಬೇಕು. ಹಾಗೆಯೇ ಪರಿಸರದ ಬಗ್ಗೆ ಅರಿತುಕೊಂಡು ಗಿಡ ಮರಗಳನ್ನು ಬೆಳೆಸಿ ಪೋಷಿಸುವ ಜೊತೆಗೆ ಅದರ ರಕ್ಷಣೆಗೆ ಈಗಿನಿಂದಲೆ ಕಟಿಬದ್ಧರಾಗಿರಬೇಕೆಂದು ತಿಳಿಸಿದರು.
ಈ ವೇಳೆ ನಾಯಕಿ ನಟಿ ಶಿಲ್ಪ ಶ್ರೀ, ಸಿಂಚನಗೌಡ, ವಿದ್ಯಾ ದಿವ್ಯಶ್ರೀ, ಎಂ ಎಂ ಗ್ರೂಪ್ಸ್ ನ ಮಹಾನ್ ಶ್ರೇಯಸ್, ಮಲ್ಲಿಕಾರ್ಜುನ ಸ್ವಾಮಿ, ಲಿಖಿತ್, ಉಮೇಶ್, ಅಭಿಲಾಶ್ ಸಿಂಹ,ಛಾಯ,ಗಾಯಕ ಯಶವಂತ್ ಕುಮಾರ್ , ಬಿಜೆಪಿ ಮುಖಂಡ ಪುರುಷೋತ್ತಮ್,ರಾಜೇಶ್ ಕುಮಾರ್, ಮಹೇಶ್, ಶ್ರೀಧರ್ ಮತ್ತಿತರರು ಹಾಜರಿದ್ದರು.
