ಮೈಸೂರು: 2026ರ ನಾಡಹಬ್ಬ ದಸರಾ ಮಹೋತ್ಸವಕ್ಕೆ ಆಗಮಿಸಿರುವ ಮಾವುತ ಹಾಗೂ ಕಾವಾಡಿ ಕುಟುಂಬದ ಮಹಿಳೆಯರಿಗೆ ಅರಮನೆ ಆವರಣದಲ್ಲಿ ಶ್ರೀ ದುರ್ಗಾ ಫೌಂಡೇಶನ್ ಹಾಗೂ ಮೇಕ್ ಸೊಸೈಟಿ ಸ್ಮೈಲ್ ಫೌಂಡೇಶನ್ ವತಿಯಿಂದ ಬಾಗಿನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಕುಂಕುಮ, ಅರಿಶಿನ, ಬಳೆ, ಹೂವು ಸೇರಿದಂತೆ ಸಾಂಪ್ರದಾಯಿಕ ಬಾಗಿನವನ್ನು ವಿತರಿಸಿ ಗೌರವಿಸಲಾಯಿತು.
ದಸರಾ ಮಹೋತ್ಸವದಲ್ಲಿ ಗಜಪಡೆಯೊಂದಿಗೆ ಆಗಮಿಸಿರುವ ಮಾವುತ ಹಾಗೂ ಕಾವಾಡಿ ಕುಟುಂಬಗಳ ಸೇವೆಯನ್ನು ಸ್ಮರಿಸಿ, ಅವರ ಕುಟುಂಬದ ಮಹಿಳೆಯರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್ ತಿಳಿಸಿದರು
ದಸರಾ ಸಂಭ್ರಮದ ನಡುವೆ ಬಾಗಿನ ವಿತರಣೆ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.
ಈ ವೇಳೆ ಕೆಪಿಸಿಸಿ ಅಧ್ಯಕ್ಷರಾದ ನಜರ್ಬಾದ್ ನಟರಾಜ್, ಜಿ ರಾಘವೇಂದ್ರ,ಮೇಕ್ ಸೊಸೈಟಿ ಸ್ಮೈಲ್ ಫೌಂಡೇಶನ್ ರಂಜಿತಾ ಸುಬ್ರಹ್ಮಣ್ಯ, ಉದ್ಯಮಿ ಸೋಮು,ರೇಖಾ ಸುಬ್ರಹ್ಮಣ್ಯ, ಪದ್ಮ, ಶ್ವೇತಾ ಅಶೋಕ್, ಮಂಜುಳಾ ಸೋಮಣ್ಣ, ರೂಪ ,ಪಲ್ಲವಿ ಮತ್ತಿತರರು ಹಾಜರಿದ್ದರು.
