ಮೈಸೂರು: ವಾಟರ್_ಪಾರ್ಕ್ ವಿರುದ್ಧ
ಮೃಗಾಲಯದ ಪ್ರಾಧಿಕಾರದ ಅಧ್ಯಕ್ಷರಿಗೆ ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ಮನವಿ ಸಲ್ಲಿಸಿದರು.
ಮೃಗಾಲಯಕ್ಕೆ ಹೊಂದಿಕೊಂಡಂತೆ ಅಕ್ರಮವಾಗಿ ನಿರ್ಮಾಣ ವಾಗಿರುವ ವಾಟರ್_ಪಾರ್ಕ್ ಅನ್ನು ಪ್ರಾಣಿಪಕ್ಷಿಗಳ_ಆರೋಗ್ಯದ_ಹಿತದೃಷ್ಟಿಯಿಂದ ಕೂಡಲೇ_ತೆರವುಗೊಳಿಸುವಂತೆ ತೇಜಸ್ವಿ ಆಗ್ರಹಿಸಿದರು.
ಕರ್ನಾಟಕ ಮೃಗಾಲಯ ಪ್ರಾಧಿಕಾರದ
ಅಧ್ಯಕ್ಷರಾದ ಎನ್,ರಂಗಸ್ವಾಮಿ ಅವರನ್ನು ಇಂದು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ಅವರು ಮೃಗಾಲಯದ ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿ ಯಾವುದೇ ಕಾರಣಕ್ಕೂ ವಾಟರ್ ಪಾರ್ಕ್ ಕಾರ್ಯ ನಿರ್ವಹಣೆ ಮಾಡದಂತೆ ನೋಡಿಕೊಳ್ಳಬೇಕೆಂದು ಕೋರಿದರು.
