ಮಂಡ್ಯ: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಕರೆಯಲಾಗಿದ್ದ ದಲಿತ ಸಂಘರ್ಷ ಸಮಿತಿ ಬಣ ರಹಿತ ದ ಮಂಡ್ಯ ಜಿಲ್ಲಾ ಮಹಿಳಾ ಕಾರ್ಯಕರ್ತರ ಸಭೆಯಲ್ಲಿ ಮಂಡ್ಯ ಜಿಲ್ಲಾ ಮಹಿಳಾ ಘಟಕಕ್ಕೆ ನೂತನ ತಾತ್ಕಾಲಿಕ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಈ ಸಭೆಯ ಅಧ್ಯಕ್ಷತೆಯನ್ನು ದಲಿತ ಸಂಘರ್ಷ ಸಮಿತಿ ಬಣ ರಹಿತ (ರಿ ) ಮೈಸೂರು ಜಿಲ್ಲಾ ಸಂಚಾಲಕರು ಹಾಗೂ ರಾಜ್ಯ ಮುಖಂಡರಾದ ಸಿ. ಉಮಾಮಹದೇವ ಅವರು ವಹಿಸಿದ್ದರು.
ಸಭೆಯಲ್ಲಿ ಮಾತನಾಡಿದ ಉಮಾಮಹದೇವ ಅವರು,ಮಂಡ್ಯ ಜಿಲ್ಲೆ ಸೇರಿದಂತೆ ಕರ್ನಾಟಕದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ದಬ್ಬಾಳಿಕೆ ಸೌಲಭ್ಯ ವಂಚನೆ ಅಸ್ಪೃಶ್ಯತೆ ಆಚರಣೆ ದಲಿತ ಮಹಿಳೆಯರು ಅನ್ನೋ ಕಾರಣಕ್ಕೆ ನಡೆಯುವ ಲೈಂಗಿಕ ದೌರ್ಜನ್ಯ ವ್ಯಾಪಾಕವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅದರಲ್ಲೂ ದಲಿತ ಮಹಿಳೆಯರು ಮೀಸಲಾತಿ ಮೂಲಕ ಆಯ್ಕೆ ಆಗುವ ಗ್ರಾಮಪಂಚಾಯಿತಿ ಅಧ್ಯಕ್ಷರುಗಳ ಮೇಲೆಯೇ ದಬ್ಬಾಳಿಕೆಗಳು ಹೆಚ್ಚಾಗಿ ನಡೆಯುತ್ತಿದೆ, ಅವರು ತಮ್ಮ ಅಧಿಕಾರವನ್ನು ಚಲಾಯಿಸಲು ಬಲಾಢ್ಯ ಸಮುದಾಯದ ಸದಸ್ಯರುಗಳು ಅಧಿಕಾರಿಗಳು ಬಿಡುತ್ತಿಲ್ಲ ಎಂದು ಆರೋಪಿಸಿದರು.
ಪೊಲೀಸ್ ಠಾಣೆಗಳಲ್ಲಿ ಬಲಾಢ್ಯ ಸಮುದಾಯದ ವ್ಯಕ್ತಿಯೊಬ್ಬ ಊರ ಮುಖಂಡ ಎಂದು ಹೇಳಿಕೊಂಡು ಹೋಗುವ ವ್ಯಕ್ತಿಗಿಂತಲೂ ಕಡೆಯಾಗಿ ಸ್ವಾಭಿಮಾನಿ ದಲಿತ ಮಹಿಳಾ ಗ್ರಾಮಪಂಚಾಯಿತಿ ಅಧ್ಯಕ್ಷರಾದವರಿಗೆ ಗೌರವ ನೀಡುತ್ತಿಲ್ಲ. ಠಾಣೆಯ ಉನ್ನತ ಅಧಿಕಾರಿ ಇರಲಿ ಒಬ್ಬ ಪೊಲೀಸ್ ಪೆದೆಯೇ ದಲಿತ ಮಹಿಳಾ ಅಧ್ಯಕ್ಷರುಗಳನ್ನು ಕಡೆಗಣಿಸುತ್ತಿದ್ದಾರೆ. ಸ್ವತಃ ದೌರ್ಜನ್ಯಕ್ಕೆ ಒಳಗಾಗಿ ನೀಡುವ ದೂರನ್ನು ತಿಂಗಳುಗಳೇ ಕಳೆದರು ದಾಖಲಾತಿ ಮಾಡಿಕೊಳ್ಳದ ಪರಿಸ್ಥಿತಿ ಇದೆ ಎಂದು ವಿಷಾದಿಸಿದರು.
ಮಹಿಳೆಯರಿಗೆ ಗ್ರಾಮಪಂಚಾಯಿತಿಗಳ ಮೂಲಕ ಹಾಗೂ ವಿವಿಧ ಇಲಾಖೆ ನಿಗಮಗಳಲ್ಲಿ ನೀಡಲಾಗುವ ಯಾವೊಂದು ಸವಲತ್ತುಗಳು ಸರಿಯಾಗಿ ಸಿಗುತ್ತಿಲ್ಲ. ಅದರಲ್ಲೂ ಮಂಡ್ಯ ಜಿಲ್ಲೆಯಲ್ಲಿ ದಲಿತರನ್ನು ದಲಿತರ ಮೂಲಕವೆ ಹತ್ತಿಕ್ಕುವ ಕೆಲಸವನ್ನು ಬಲಢ್ಯ ಸಮುದಾಯ ಮಾಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಹಿಳೆಯರಿಗೆ ತಮ್ಮ ಮೇಲಾಗುವ ಶೋಷಣೆ ವಿರುದ್ಧ ಹೊರಾಡಲು, ಹಕ್ಕುಗಳನ್ನು ಪಡೆಯಲು, ಸರ್ಕಾದ ನೀತಿ ನಿಯಮಗಳನ್ನು ತಿಳಿಯಲು, ಬಡತನದಿಂದ ಹೊರಬರಲು, ಅಸ್ಪೃಶ್ಯತೆ ಆಚರಣೆ ವಿರುದ್ಧ ಹೊರಡಲು ಮಹಿಳಾ ಸಂಘಟನೆ ಅಗತ್ಯವಾಗಿದ್ದು ಆ ನಿಟ್ಟಿನಲ್ಲಿ ಮಂಡ್ಯ ಜಿಲ್ಲೆಯ ಈ ನೂತನ ದಲಿತ ಸಂಘರ್ಷ ಸಮಿತಿ ಬಣ ರಹಿತ (ರಿ ) ಮಹಿಳಾ ಘಟಕ ಕೆಲಸ ಮಾಡಲಿ ಎಂದು ಉಮಾಮಹದೇವ ಶುಭ ಹಾರೈಸಿದರು.
ಸಭೆಯಲ್ಲಿ ದಲಿತ ಸಂಘರ್ಷ ಸಮಿತಿ ಬಣ ರಹಿತ (ರಿ ) ಮೈಸೂರು ಜಿಲ್ಲಾ ಸಂಘಟನಾ ಸಂಚಾಲಕರಾದ ಆಲತ್ತೂರು ಶಿವರಾಜ್, ಸಂಘಟನಾ ಸಂಚಾಲಕರು ವಿದ್ಯಾರ್ಥಿ ವಿಭಾಗ ಮೈಸೂರು ಕೆ ಅರ್. ನಗರದ ಸಿಂಚನ, ಮೈಸೂರು ನಗರ ಹಾಗೂ ಗ್ರಾಮಾಂತರ ಸಂಚಾಲಕರಾದ ಚುಂಚರಾಯನ ಹುಂಡಿ ರವಿ ಸಿ. ಎಸ್, ಮಹಿಳಾ ಸಂಘಟನೆ ಅಗತ್ಯತೆ ಕುರಿತು ವಿವರವಾಗಿ ಮಾತನಾಡಿದರು.
ಮಂಡ್ಯ ಜಿಲ್ಲಾ ದಲಿತ ಸಂಘರ್ಷ ಸಮಿತಿ ಬಣ ರಹಿತ (ರಿ ) ಮುಖಂಡರುಗಳಾದ ನಗುವನ ಹಳ್ಳಿ ಪಲ್ಲವಿ. ಅರಕೆರೆ ಕೆ, ಸಿದ್ದರಾಜು, ಮಹದೇವಪುರ ಆನಂದ, ಅವರು ಸಭೆಯಲ್ಲಿ ಮಾತನಾಡಿದರು.
ಹಾಗೆ ಹಲವು ಮಹಿಳಾ ಕಾರ್ಯಕರ್ತರು ತಮ್ಮ ಪ್ರಸ್ತುತ ಮಂಡ್ಯ ಜಿಲ್ಲೆಯ ಮಹಿಳೆಯರ ಸಮಸ್ಯೆಗಳ ಬಗ್ಗೆ ಹಾಗೂ ಸಂಘಟನೆ ದಿಕ್ಕು ಯಾವ ರೀತಿ ಇರಬೇಕು ಎಂಬುದರ ಬಗ್ಗೆ ತಮ್ಮ ಅನಿಸಿಕೆಗಳನ್ನು ತಿಳಿಸಿದರು.
ಪಲ್ಲವಿ. ಕೆ ನಗುವಿನ ಹಳ್ಳಿ ಮಂಡ್ಯ ಜಿಲ್ಲಾ ಮಹಿಳಾ ಘಟಕದ ಸಂಚಾಲಕರು.
ಮಂಡ್ಯ ಜಿಲ್ಲಾ ಸಂಘಟನಾ ಸಂಚಾಲಕರು :
ಎಂ.ರಾಜೇಶ್ವರಿ. ಕೆ ಶೆಟ್ಟಿಹಳ್ಳಿ,ಜಯಂತಿ ಚಲುವರಸನ ಕೊಪ್ಪಲು, ದ್ರಾಕ್ಷಾಯಿಣಿ ನಗುವನ ಹಳ್ಳಿ, ಜ್ಯೋತಿ ಸಿ. ಇ ಹೊಸೂರು,
ಶಿವಮ್ಮ ಮಂಡ್ಯ, ಶುಭಾಷಿಣಿ ಮಳವಳ್ಳಿ ಆಯ್ಕೆಯಾದರು.
ಜಿಲ್ಲಾ ಖಜಾಂಚಿಯಾಗಿ ಶಿವಮ್ಮ ನಗುವನ ಹಳ್ಳಿ ಅವರನ್ನು ಆಯ್ಕೆ ಮಾಡಲಾಗಿದೆ
ಕಾರ್ಯಕಾರಿ ಸಮಿತಿ ಸದಸ್ಯರು:
ಚಲುವಮ್ಮ ನಗುವನಹಳ್ಳಿ,
ಗೀತಾ ನಗುವನ ಹಳ್ಳಿ ಆಯ್ಕೆಯಾದರು.
ಸಭೆಯಲ್ಲಿ ಮರಿಸ್ವಾಮಿ ನಗುವನ ಹಳ್ಳಿ, ಸಿದ್ದರಾಜು ಗಾಂಧಿನಗರ, ನಿಂಗರಾಜು ಟಿ. ನರಸೀಪುರ, ಲೋಕೇಶ್, ಕುಮಾರ ಚುಂಚರಾಯನ ಹುಂಡಿ, ರಾಧಾ, ರಾಜೇಶ್ವರಿ, ಆರ್ಶಿತ, ಸಾಕಮ್ಮ, ಪುಟ್ಟಸಿದ್ದಮ್ಮ, ಜಯಮ್ಮ, ವಿದ್ಯಾಶ್ರೀ, ದ್ರಾಕ್ಷಾಯಿಣಿ, ರಾಚಮ್ಮ, ಜಯಂತಿ, ಚಂದ್ರಕಲಾ ಸೇರಿದಂತೆ ಹಲವಾರು ಮಹಿಳಾ ಕಾರ್ಯಕರ್ತರು ಭಾಗವಹಿಸಿದ್ದರು.
