ಮೈಸೂರು, ಅ.02: ದಸರಾ ಲಲಿತಕಲೆ ಮತ್ತು ಕರಕುಶಲ ಕಲೆ ಉಪ ಸಮಿತಿ ಹಾಗೂ ಕಾವಾ ಹಿರಿಯ ವಿದ್ಯಾರ್ಥಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ಅ 18 ರಂದು ಕಾವಾ ಕಾಲೇಜು ಆವರಣದಲ್ಲಿ ಕಲಾಜಾತ್ರೆ ಆಯೋಜಿಸಲಾಗಿದೆ.
ದಸರಾ ಲಲಿತಕಲೆ ಮತ್ತು ಕರಕುಶಲ ಕಲೆ ಉಪ ಸಮಿತಿಯ ಕಾರ್ಯಾಧ್ಯಕ್ಷರು ಹಾಗೂ ಕಾವಾ ಡೀನ್ ಎ. ದೇವರಾಜು ಅವರು ಕಲಾಜಾತ್ರೆ ಪೋಸ್ಟರ್ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಕಾವಾ ಹಿರಿಯ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷ ಮಧುಸೂದನ್ ಎಸ್.ಆರ್, ಕಾರ್ಯದರ್ಶಿ ಸೂರ್ಯ, ನಿರ್ದೇಶಕರಾದ ರಮೇಶ್ ಎಸ್, ಸಯ್ಯದ್ ಮುಜಾಯಿದ್, ಹರೀಶ್ ಹೆಗ್ಡೆ, ಕಾವಾ ಕಾಲೇಜಿನ ಉಪನ್ಯಾಸಕರಾದ ಚಂದ್ರಶೇಖರ್, ರವಿಮೂರ್ತಿ ಹಾಗೂ ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.
