ಪಿರಿಯಾಪಟ್ಟಣ: ಸಂಘಟನೆ ಕುರಿತು ಚರ್ಚಿಸಲು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಪೂರ್ವಭಾವಿ ಸಭೆಯನ್ನು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಯಿತು.
ಸಭೆಯಲ್ಲಿ ತಾಲೂಕು ಸದಸ್ಯರು ಮತ್ತು ರಾಜ್ಯ ಸದಸ್ಯರು ತಮ್ಮ ತಮ್ಮ ಅನಿಸಿಕೆಯನ್ನು ರಾಜ್ಯಾಧ್ಯಕ್ಷರಾದ ಆರ್. ಮಂಜುನಾಥಗೌಡ ಅವರಲ್ಲಿ ತಿಳಿಸಿದರು.
ನಂತರ ಆರ್. ಮಂಜುನಾಥಗೌಡ ಮಾತನಾಡಿ ತಮ್ಮ ತಮ್ಮ ವಿಷಯಗಳು ಮನವರಿಕೆಯಾಗಿದೆ ಆದರೆ ಮುಂದಿನ ದಿನಗಳಲ್ಲಿ ಸಂಘವನ್ನು ಉತ್ತಮ ರೀತಿಯಲ್ಲಿ ಮುಂದುವರಿಸಬೇಕು ಆದಕಾರಣ ತಾಲೂಕಿನಾದಂತ ಅಧ್ಯಕ್ಷರು, ಸದಸ್ಯರು ಮತ್ತು ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟನೆ ಮಾಡುವ ಮೂಲಕ ಮುನ್ನಡೆಸಿಕೊಂಡು ಹೋಗೋಣ ಎಂದು
ಹೇಳಿದರು.
ಯಾವುದೇ ತಪ್ಪುಒಪ್ಪುಗಳು ಬಂದರೂ ಅದನ್ನು ನೀವುಗಳು ಅನುಸರಿಸಿ ಕೊಂಡು ಹೋಗಬೇಕು ಅದೇ ರೀತಿ ನಿಮ್ಮಗಳ ತಪ್ಪುಗಳಿದ್ದರೂ ನಾನು ಕೂಡ ಅನುಸರಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ರಾಜ್ಯ ಯುವ ಘಟಕದ ಅಧ್ಯಕ್ಷರಾದ ಸ್ವಾಮಿಗೌಡರು ತಾಲೂಕು ಉಪಾಧ್ಯಕ್ಷರಾದ ಪ್ರಭು, ತಾಲೂಕು ಮಹಿಳಾ ಅಧ್ಯಕ್ಷರಾದ ಕಾವೇರಮ್ಮ ಬೈಲ್ದ ನ ಮನೆ, ರಾಜ್ಯ ಸದಸ್ಯರಾದ ದೇವ ಶೆಟ್ಟಿ, ತಾಲೂಕು ಯುವ ಘಟಕದ ಅಧ್ಯಕ್ಷರಾದ ಪಿ.ಎಂ ಮಂಜುನಾಥ್, ತಾಲೂಕು ಸಂಚಾಲಕರಾದ ಕೊಣಸೂರು ಶಿವರಾಜ್, ಯುವ ಘಟಕದ ಉಪಾಧ್ಯಕ್ಷರಾದ ನಾಗೇಂದ್ರ ಸಿಗೋರು, ತಾಲೂಕು ಸಂಘಟನಾ ಕಾರ್ಯದರ್ಶಿ ಯೋಗಣ್ಣ, ಪ್ರಸನ್ನ ಮತ್ತಿತರ ಸದಸ್ಯ ಪಾಲ್ಗೊಂಡಿದ್ದರು.
