ಮೈಸೂರು: ಜೆಡಿಎಸ್ ನಗರ ಉಪಾಧ್ಯಕ್ಷರಾದ ಯದುನಂದನ್ ನೇತೃತ್ವದಲ್ಲಿ ಜೆಡಿಎಸ್ ಮುಖಂಡರು
ಚಾಮುಂಡಿ ಬೆಟ್ಟದ ಪಾದದಲ್ಲಿ
ಇಂದು ಮಾಜಿ ಪ್ರಧಾನಿಗಳಾದ ಎಚ್ ಡಿ ದೇವೇಗೌಡ ಧರ್ಮ ಪತ್ನಿ ಚೆನ್ನಮ್ಮ ಅವರಿಗೆ
ಸಂತಾಪ ವ್ಯಕ್ತಪಡಿಸಿದರು.
ಸರಳತೆಯ ಸಾಕಾರಮೂರ್ತಿಗಳಾಗಿದ್ದ ಚೆನ್ನಮ್ಮ ದೇವೇಗೌಡ ಅವರು ದೈವಾಧೀನರಾದ ಹಿನ್ನೆಲೆಯಲ್ಲಿ ಅವರ ಭಾವಚಿತ್ರ ಹಿಡಿದು ಮೇಣದಬತ್ತಿ ಬೆಳಗಿಸಿ ಸಂತಾಪ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ನಗರ ಉಪಾಧ್ಯಕ್ಷ ಯದುನಂದನ್
ಅವರು ಮಾತನಾಡಿ,ಚೆನ್ನಮ್ಮ ಅವರು ದೈವಾಧೀನರಾದ ಸುದ್ದಿ ತಿಳಿದು ತೀವ್ರ ದುಃಖವಾಗಿದೆ,ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾಗೂ ಕುಟುಂಬದ ಸದಸ್ಯರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ . ಎಂದು ಹೇಳಿದರು.
ಈ ಸಂದರ್ಭದಲ್ಲಿ ವೆಂಕಟೇಶ್, ಮಂಜು ಗೌಡ, ಯೋಗಾನಂದ, ಮಹೇಶ್, ಶ್ರೀಕಾಂತ್ ಕಶ್ಯಪ್, ಸ್ವಾಮಿ, ಚಂದ್ರು, ಕುಮಾರ್ ಮತ್ತಿರರು ಸಂತಾಪ ಸಲ್ಲಿಸಿದರು.
