ಹುಣಸೂರು: ಹುಣಸೂರಿನ ಸಿ ಬಿ ಟಿ ಕಾಲೋನಿಯ ಸುಮಾರು 900 ಮಹಿಳೆಯರಿಂದ ವಸಂತಾ ಎಂಬಾಕೆ ಸಂಜೀವಿನಿ ಸಂಘಕ್ಕೆ ಸೇರ್ಪಡೆ ಮಾಡುವುದಾಗಿ ನಂಬಿಸಿ ದಾಖಲೆಗಳನ್ನು ಪಡೆದು ಮೋಸ ಮಾಡಿದ್ದಾರೆಂದು ಮಹಿಳೆಯರು ದೂರಿದ್ದಾರೆ.
ವಸಂತ ಎಂಬಾಕೆ ಇಕೆ ವೈ ಸಿ ಮಾಡಿಸುವುದಾಗಿ ಹೇಳಿ ಒಟಿಪಿ ಪಡೆದಿದ್ದಾಳೆ,ಅಲ್ಲದೆ ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವುದಾಗಿ ಸುಳ್ಳು ಹೇಳಿ ಮಹಿಳೆಯರಿಂದ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಕಣ್ಣಿನ ಸ್ಕ್ಯಾನ್ ಮಾಡಿಸಿ ಜೊತೆಗೆ ಒಟಿಪಿಯನ್ನು ಪಡೆದು ಎಲ್ಲರಿಗೂ ವಂಚಿಸಿದ್ದಾರೆ ಎಂದು ನೂರಾರು ಮಂದಿ ಆರೋಪಿಸಿ ಪೊಲೀಸರಿಗೆ ಮತ್ತು ತಾಲೂಕು ಪಂಚಾಯತಿ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ಈ ಸಂಬಂಧ ಪೊಲೀಸ್ ಉಪಾಧ್ಯಕ್ಷಕರಾದ ರವಿ ಮತ್ತು ತಾಲೂಕು ಪಂಚಾಯಿತಿ ಅಧಿಕಾರಿಗಳು ವಸಂತ ಎಂಬ ಮಹಿಳೆಯನ್ನು ಕರೆಸಿ ವಿಚಾರಣೆ ಮಾಡಿ ಕಳಿಸಿದ್ದಾರೆ.
ದಾಖಲೆಗಳನ್ನು ನೀಡಿರುವ ಎಲ್ಲಾ ಮಹಿಳೆಯರಿಗೂ ಸಮಾಧಾನಪಡಿಸಿ ನಿಮ್ಮ ದಾಖಲೆಗಳನ್ನು ವಾಪಸ್ಸು ಕೊಡಿಸುತ್ತೇವೆ ಮತ್ತೆ ಯಾವುದೇ ಹಣದ ಮೋಸವಾಗದಂತೆ ನೋಡಿಕೊಳ್ಳುತ್ತೇವೆ, ಸಂಬಂಧಪಟ್ಟವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ, ಮಹಿಳೆಯ ವಿರುದ್ಧವೂ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.
