ಮೈಸೂರು: ಕರ್ನಾಟಕದ ಮೈಸೂರಿನ ಪುನೀತ್ ಜಿ. ಮತ್ತು ಪೂಜಾ ಎನ್. ದಂಪತಿಗಳ ಪುತ್ರ,9 ವರ್ಷದ ಪೃಥು ಪಿ. ಅದ್ವೈತ್ ಪ್ರತಿಷ್ಠಿತ ಪನೋರಮಾ ಇಂಟರ್ನ್ಯಾಷನಲ್ ಲಿಟರೇಚರ್ ಫೆಸ್ಟಿವಲ್ 2026ಕ್ಕೆ ಭಾರತದ ಪರವಾಗಿ ಆಯ್ಕೆಯಾಗಿ ಇಡೀ ನಾಡಿನ ಕೀರ್ತಿ ಹೆಚ್ಚಿಸಿದ್ದಾರೆ.
ಪೃಥು ಮೈಸೂರಿನ ಪೂರ್ಣ ಚೇತನ ಪಬ್ಲಿಕ್ ಶಾಲೆಯ ವಿದ್ಯಾರ್ಥಿ. ಪ್ರತಿಷ್ಠಿತ ‘ಪನೋರಮಾ ಇಂಟರ್ನ್ಯಾಷನಲ್ ಲಿಟರೇಚರ್ ಫೆಸ್ಟಿವಲ್ ಗೆ ಭಾರತದ ಪರವಾಗಿ ಆಯ್ಕೆಯಾದ ಅತ್ಯಂತ ಕಿರಿಯ ಪ್ರತಿನಿಧಿ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
100 ದೇಶಗಳ ಲೇಖಕರು ಭಾಗವಹಿಸುವ ಈ ಮಹೋನ್ನತ ವೇದಿಕೆಯಲ್ಲಿ ಪೃಥು ಈ ವರ್ಷದ ಆಶಯವಾದ “ಪೃಥ್ವಿ – ಭೂಮಿಯ ಅಂಶ” ಕುರಿತು ವಿಚಾರಗಳನ್ನು ಮಂಡಿಸಲಿದ್ದಾರೆ.
ಪೃಥು ಅವರು ಮೂಲತಃ ಕನ್ನಡದಲ್ಲಿ ರಚಿಸಿರುವ ಹಾಗೂ ನಂತರ ಇಂಗ್ಲಿಷ್ಗೆ ಅನುವಾದಗೊಂಡಿರುವ ಆರು ಕವನಗಳ ಪೃಥ್ವಿ ಕವನ ಮಾಲಿಕೆ ಮತ್ತು ವಿವರವಾದ ಪೀಠಿಕೆಯನ್ನು ಕಂಡು ಅಂತರಾಷ್ಟ್ರೀಯ ಸಂಪಾದಕೀಯ ಮಂಡಳಿಯು ಸಂತಸ ವ್ಯಕ್ತಪಡಿಸಿದೆ.
ರೈಟರ್ಸ್ ಇಂಟರ್ನ್ಯಾಷನಲ್ ಎಡಿಷನ್ ನ ಮುಖ್ಯ ಸಂಪಾದಕಿ ಪ್ರೊ. ಐರಿನ್ ಡೌರಾ-ಕವಾಡಿಯಾ ಅವರು ಪೃಥು ಅವರ ಪ್ರತಿಭೆಯನ್ನು ಕೊಂಡಾಡಿದ್ದಾರೆ.
ಈ ಚಿಕ್ಕ ವಯಸ್ಸಿನಲ್ಲಿ ಪರಿಸರದ ಬಗ್ಗೆ ಪೃಥು ಅವರಿಗಿರುವ ಸೂಕ್ಷ್ಮತೆಯು ಅಸಾಧಾರಣವಾದುದು. ಪ್ರಕೃತಿಯ ಬಗ್ಗೆ ಅವರಿಗಿರುವ ಕಾಳಜಿಯು ಕೇವಲ ಅನುಕರಣೆಯಲ್ಲ, ಅದು ಅವರ ಅಂತಃಕರಣದ ದನಿಯಾಗಿದೆ. ಇಂತಹ ಅಪರೂಪದ ಧ್ವನಿಯನ್ನು ಜಾಗತಿಕ ಮಟ್ಟದಲ್ಲಿ ಪೋಷಿಸುವುದು ನಮ್ಮ ಜವಾಬ್ದಾರಿ ಎಂದು ಪ್ರೊ. ಐರಿನ್ ಶ್ಲಾಘಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ಇವರ ಬರಹಗಳನ್ನು ಐದು ಭಾಷೆಗಳಲ್ಲಿ ಬಹುಭಾಷಾ ಸಂಕಲನವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಕಟಿಸಲು ಸಂಸ್ಥೆ ಮುಂದಾಗಿದೆ. ಅಲ್ಲದೆ, ಈ ಕೃತಿಯು ಪನೋರಮಾ ಇಂಟರ್ನ್ಯಾಷನಲ್ ಬುಕ್ ಅವಾರ್ಡ್ಸ್ 2026′ ಕ್ಕೂ ಪರಿಗಣಿಸಲ್ಪಟ್ಟಿದೆ.
ಪೃಥು ಅವರ ಈ ಅಂತರಾಷ್ಟ್ರೀಯ ಸಾಧನೆಯ ಬಗ್ಗೆ ಶಾಲೆಯ ‘ಇ-ಪತ್ರಿಕೆ’ ಸಂಪಾದಕೀಯ ಮಂಡಳಿಯು ಅತ್ಯಂತ ಹೆಮ್ಮೆಯಿಂದ ಅಭಿನಂದನೆ ಸಲ್ಲಿಸಿದೆ.
ನಮ್ಮ ಶಾಲೆಯ 4ನೇ ತರಗತಿ ವಿದ್ಯಾರ್ಥಿ ಇಷ್ಟು ಚಿಕ್ಕ ವಯಸ್ಸಿನಲ್ಲಿ ಜಾಗತಿಕ ಮನ್ನಣೆ ಪಡೆಯುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಅವರ ಸೃಜನಶೀಲತೆ ಮತ್ತು ಭೂಮಿ ತಾಯಿಯೊಂದಿಗಿನ ಅವರ ಗಾಢವಾದ ಸಂಬಂಧವು ಬರಹಗಳಲ್ಲಿ ಅದ್ಭುತವಾಗಿ ಮೂಡಿಬಂದಿದೆ. ನಮ್ಮ ಶಾಲೆಯ ‘ಇ-ಪತ್ರಿಕೆ’ ಪೃಥು ಅವರ ಸಾಹಿತ್ಯ ಬೆಳವಣಿಗೆಗೆ ವೇದಿಕೆಯಾಗಿರುವುದು ನಮಗೆ ಸಂತಸ ತಂದಿದೆ ಎಂದು ಶಾಲೆ ತಿಳಿಸಿದೆ.
ಇದೆಲ್ಲಾ ಶ್ಲಾಘನೆಗೆ
ಪೃಥು ಪಿ. ಅದ್ವೈತ್ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ನನ್ನ ಬರಹಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಪನೋರಮಾ ಇಂಟರ್ನ್ಯಾಷನಲ್ ಲಿಟರೇಚರ್ ಫೆಸ್ಟಿವಲ್ ಮತ್ತು ನನ್ನ ಕೃತಿಯನ್ನು ಐದು ಭಾಷೆಗಳಲ್ಲಿ ಪ್ರಕಟಿಸಲು ಮುಂದಾದ ರೈಟರ್ಸ್ ಇಂಟರ್ನ್ಯಾಷನಲ್ ಎಡಿಷನ್ ಸಂಸ್ಥೆಗೆ ನಾನು ಸದಾ ಚಿರ ಋಣಿ ಎಂದು ಹೇಳಿದ್ದಾರೆ.
ನಾನು ಮೂಲತಃ ಕನ್ನಡದಲ್ಲಿ ಬರೆದು ಜೊತೆಗೆ ಕವನಗಳನ್ನು ಇಂಗ್ಲಿಷ್ಗೆ ಅನುವಾದಿಸಿ ಈ ವೇದಿಕೆಗೆ ಅರ್ಪಿಸಿದ್ದೇನೆ.
ನನ್ನ ಪ್ರತಿಭೆಯನ್ನು ಮೊದಲು ಗುರುತಿಸಿ ವೇದಿಕೆ ಒದಗಿಸಿದ ನನ್ನ ಶಾಲೆಯ ‘ಇ-ಪತ್ರಿಕೆ’ ಮತ್ತು ‘ರೇಷ್ಮೆನಾಡು’ ಪತ್ರಿಕೆಯ ಸಂಪಾದಕರಿಗೆ ಹೃತ್ಪೂರ್ವಕ ಧನ್ಯವಾದಗಳು.
ನನ್ನ ತಂದೆ-ತಾಯಿಯ ಪ್ರೋತ್ಸಾಹವೇ ಇವೆಲ್ಲದಕ್ಕೂ ಕಾರಣ. ‘ಭೂಮಿಯು ಕಸದ ತೊಟ್ಟಿಯಲ್ಲ, ಅದು ನಮಗೆ ಅನ್ನ ನೀಡುವ ಪವಿತ್ರ ಬುಟ್ಟಿ’ ಎಂಬ ಸತ್ಯವನ್ನು ಜಗತ್ತಿಗೆ ಸಾರುವ ಜವಾಬ್ದಾರಿಯನ್ನು ನಾನು ಹೆಮ್ಮೆಯಿಂದ ನಿಭಾಯಿಸುತ್ತೇನೆ ಎಂದು ಪೃಥು ತಿಳಿಸಿದ್ದಾರೆ.
ಪೃಥುವಿನ ಸಾಧನೆ-
ವಿಶ್ವ ದಾಖಲೆ: 30 ನಿಮಿಷಗಳಲ್ಲಿ 150 ಶ್ಲೋಕಗಳ ಪಠಣ (ಜುಲೈ 2024).
ಹಸಿರು ಸಂಕಲ್ಪ: ಪ್ರತಿ ವರ್ಷ ತಮ್ಮ ಹುಟ್ಟುಹಬ್ಬದಂದು ತಮ್ಮ ವಯಸ್ಸಿನಷ್ಟೇ ಸಸಿಗಳನ್ನು ನೆಡುವ ಸಂಪ್ರದಾಯ.
ಇವರ ಸಾಧನೆಗೆ ಈಗಾಗಲೇ ಎರಡು ಗೌರವ ಡಾಕ್ಟರೇಟ್ಗಳು ಲಭಿಸಿವೆ.
ಕಲೆ ಮತ್ತು ಕ್ರೀಡೆ: ಕರ್ನಾಟಕ ಶಾಸ್ತ್ರೀಯ ಸಂಗೀತ, ತಬಲಾ ವಾದನ ಮತ್ತು ಬ್ಯಾಡ್ಮಿಂಟನ್ನಲ್ಲಿ ತೊಡಗಿಸಿಕೊಂಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಪುನೀತ್ ಜಿ, ಪೂಜಾ ಎನ್.ದೂರವಾಣಿ:+91 8105366574
ಇನ್ಸ್ಟಾಗ್ರಾಮ್: @dr.pruthu.p.advaith ಸಂಪರ್ಕಿಸಬಹುದು.
