ಹುಣಸೂರು: ಪಟ್ಟಣದ ಅಂಬೇಡ್ಕರ್ ಭವನದಲ್ಲಿ ತಾಲ್ಲೂಕು ಅಧ್ಯಕ್ಷರಾದ ಬೆಂಕಿಪುರ ಚಿಕ್ಕಣ್ಣ ಅವರ ಅಧ್ಯಕ್ಷತೆಯಲ್ಲಿ
ರಾಜ್ಯ ರೈತ ಸಂಘದ ಹುಣಸೂರು ತಾ. ಪೂರ್ಣ ಕಾರ್ಯಕರ್ತರ ಸಭೆಯನ್ನು ಹಮ್ಮಿಕೊಳ್ಳಲಾಯುತು.
ಈ ಸಭೆಗೆ ಪ್ರಧಾನ ಕಾರ್ಯದರ್ಶಿ ಅಗ್ರಹಾರ ರಾಮೇಗೌಡರು,ತಾಲ್ಲೂಕು ಪದಾಧಿಕಾರಿಗಳು, ಹೋಬಳಿ ಪದಾಧಿಕಾರಿಗಳು ಮತ್ತು ಎಲ್ಲಾ ಗ್ರಾಮ ಘಟಕದ ಅಧ್ಯಕ್ಷರು, ಕಾರ್ಯದರ್ಶಿಗಳು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಗ್ರಾಮ ಪಂಚಾಯತ್ ಕಾಯ್ದೆ ಮತ್ತು ಗ್ರಾಮ ಸಭಾದ ಮಹತ್ವದ ಬಗ್ಗೆ ವಿಚಾರಮಂಡನೆ ಮಾಡಲಾಯಿತು.
ಪ್ರತಿ ಗ್ರಾಮದಲ್ಲಿ ಕಾರ್ಯಕರ್ತರನ್ನು ಹುಟ್ಟು ಹಾಕುವ ಕುರಿತು ಮತ್ತು ತಾಲೂಕು ಸಮಿತಿ ಪುನರ್ರಚನೆ ಕುರಿತು ಚರ್ಚಿಸಲಾಯಿತು.
ಈ ಸಾಲಿನ ರಾಜ್ಯ ಬಜೆಟ್ನಲ್ಲಿ ತಾಲ್ಲೂಕಿನ ಅಭಿವೃದ್ಧಿಗೆ ಹೆಚ್ಚು ಅನುದಾನ ಪಡೆಯಲು ಸರ್ಕಾರವನ್ನು ಒತ್ತಾಯಪಡಿಸುವ ಬಗ್ಗೆ ಚರ್ಚಿಸಲಾಯಿತು.
ಜಿಲ್ಲಾ ಮಟ್ಟದ ಅಧ್ಯಯನ ಶಿಭಿರದಲ್ಲಿ ಪಾಲ್ಗೊಳ್ಳುವುದೂ, ಸೇರಿದಂತೆ ಅನೇಕ ವಿಷಯಗಳು ಹಾಗೂ ರೈತರ ಸಮಸ್ಯೆಗಳ ಬಗ್ಗೆಯೂ ವಿಚಾರ ವಿನಿಮಯ ಮಾಡಲಾಯಿತು.
ಸಭೆಯಲ್ಲಿ ಮಹಿಳಾ ಪ್ರಧಾನ ಕಾರ್ಯದರ್ಶಿ ನೇತ್ರಾವತಿ, ವಿಭಾಗೀಯ ಸಂಘಟನಾ ಕಾರ್ಯದರ್ಶಿ ಹೊಸಕೋಟೆ ಬಸವರಾಜ್, ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಪ್ರಧಾನ ಕಾರ್ಯದರ್ಶಿ ಪಿ, ಮರಂಕಯ್ಯ, ಉಪಾಧ್ಯಕ್ಷರುಗಳಾದ ಪಿ.ಪಳನಿಸ್ವಾಮಿ, ಸಿಂಗೇಗೌಡ, ಆಲಿಜಾನ್, ಜಿಲ್ಲಾ ಕಾರ್ಯದರ್ಶಿ ನಾಗನಹಳ್ಳಿ ವಿಜೇಂದ್ರ, ಸಂಘಟನಾ ಕಾರ್ಯದರ್ಶಿ ಸೋಗಳ್ಳಿ ಮಟ್ಟಣ್ಣಯ್ಯ, ಜಿಲ್ಲಾ ಮುಖಂಡರಾದ ಬಸವರಾಜೇಗೌಡ, ಜಿಲ್ಲಾ ಖಜಾಂಚಿ ಶ್ಯಾನುಭೋಗನ ಹಳ್ಳಿ ಈಶ್ವರ್, ಹೆಚ್. ಡಿ. ಕೋಟೆ, ಸರಗೂರು, ಪಿರಿಯಾಪಟ್ಟಣ, ಕೆ.ಆರ್. ನಗರ, ಸಾಲಿಗ್ರಾಮ ಮತ್ತು ಮೈಸೂರು ತಾಲ್ಲೂಕಿನ ಅಧ್ಯಕ್ಷರು ಕಾರ್ಯದರ್ಶಿಗಳು ಭಾಗವಹಿಸಿದ್ದರು.
