ಮೈಸೂರು: ಪಶ್ಚಿಮ ಬಂಗಾಳ ಮೂಲದ ಯುವತಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ ಹೇಯ ಘಟನೆ ಮೈಸೂರು ಜಿಲ್ಲೆ, ಟಿ.ನರಸೀಪುರದಲ್ಲಿ ನಡೆದಿದ್ದು ತಡವಾಗಿ ಗೊತ್ತಾಗಿದೆ.
ಎರಡು ದಿನಗಳ ಹಿಂದೆ ಟಿ. ನರಸೀಪುರದ ಖಾಸಗಿ ಬಸ್ ನಿಲ್ದಾಣದ ಬಳಿ ಯುವತಿ ನಿಂತಿದ್ದಳು.ಆಗ ಮೂವರು ಯುವಕರು ಆಕೆಯನ್ನು ಅಪಹರಿಸಿ, ಚಾಮರಾಜನಗರ ತಾಲೂಕಿನ ಸಂತೆಮರಳ್ಳಿಯ ಲಾಡ್ಜ್ ಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪವಿದೆ.
ಬಸ್ ನಿಲ್ದಾಣದಲ್ಲಿ ನಿಂತಿದ್ದೆ,ಆಗ ಮೂವರು ಯುವಕರು ಬಲವಂತವಾಗಿ ಕಾರಿನಲ್ಲಿ ಕೂರಿಸಿ, ಸಂತೆಮರಹಳ್ಳಿ ಪಟ್ಟಣದ ಲಾಡ್ಜ್ಗೆ ಕರೆದೊಯ್ದು, ಅಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದರೆಂದು ಯುವತಿ ದೂರಿದ್ದಾಳೆ.
ದೂರು ದಾಖಲಾದ ತಕ್ಷಣ ಅಲರ್ಟ್ ಆದ ಟಿ.ನರಸೀಪುರ ಪೊಲೀಸರು 24 ಗಂಟೆಯೊಳಗೆ ಪಟ್ಟಣದ ಕಿರಣ್, ಕಿಶೋರ್ ಮತ್ತು ರಿಯಾನ್ ಎಂಬವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಆದರೆ ವಿಚಾರಣೆ ವೇಳೆ ಮೂವರು ಆರೋಪಿಗಳು ನಾವು ಯುವತಿಯನ್ನು ಅಪಹರಿಸಲಿಲ್ಲ,ತಾನಾಗಿಯೇ ಜೆತೆಗೆ ಬಂದರು ಎಂದು ಹೇಳಿಕೊಂಡಿದ್ದಾರೆ.
ಅಲ್ಲದೆ ವಿಡಿಯೋ ಚಿತ್ರೀಕರಣ ವಿಚಾರಕ್ಕೆ ಸಂಬಂಧ ಲಾಡ್ಜ್ನಲ್ಲಿ ವಾಗ್ವಾದ ನಡೆಯಿತು, ನಂತರ, ಯುವತಿಯನ್ನು ಅವರ ಸ್ಥಳಕ್ಕೆ ಬಿಟ್ಟು ಬಂದೆವು ಎಂಬುದಾಗಿ ಆರೋಪಿಗಳು ತಿಳಿಸಿದರೆಂದು ಪೊಲೀಸರು ಹೇಳಿದ್ದಾರೆ.
ಈ ಕೃತ್ಯದ ಹಿಂದಿನ ಸತ್ಯಾಸತ್ಯತೆ ಗೊತ್ತಾಗಬೇಕಿದೆ,ಯುವತಿ ಸ್ವಯಂಪ್ರೇರಿತವಾಗಿ ಯುವಕರೊಂದಿಗೆ ಹೋಗಿದ್ದರೆ ಆಕೆಯ ಮೇಲೂ ಕಠಿಣ ಕ್ರಮ ತೆಗೆದುಕೊಳ್ಳಬೇಕಿದೆ.ಒಂದು ವೇಳೆ ಯುವಕರೇ ಆಕೆಯನ್ನು ಅಪಹರಿಸಿ ಗ್ಯಾಂಗ್ ರೇಪ್ ಮಾಡಿದ್ದರೆ ಆ ಮೂವರ ಮೇಲೂ ಕಠಿಣಾತಿ ಕಠಿಣ ಕ್ರಮ ಕೈಗೊಳ್ಳಬೇಕು.
ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಸಂತ್ರಸ್ತೆಯ ಹಿನ್ನೆಲೆಯನ್ನು ಪರಿಶೀಲಿಸಲಾಗುತ್ತಿದೆ ಮತ್ತು ಆರೋಪಿಗಳ ಹೇಳಿಕೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣ ಏನಾಗಲಿದೆ ಎಂಬುದನ್ನುಕಾದು ನೋಡಬೇಕು.
