ಮೈಸೂರು: ಹನುಮಾನ್ ಚಾಲೀಸ ಪಠಣದಿಂದ ಮನುಷ್ಯನ ಆಯಸ್ಸು ಆರೋಗ್ಯ ವೃದ್ಧಿಸಿ, ಶಾಂತಿ ಲಭಿಸಲಿದೆ ಎಂದು
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ತಿಳಿಸಿದರು.
ಅವಧೂತ ದತ್ತಪೀಠದ ವತಿಯಿಂದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ರವರ ನೇತೃತ್ವದಲ್ಲಿ ಫೆಬ್ರವರಿ 14ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಶ್ರೀ ಹನುಮಾನ್ ಚಾಲೀಸ ಪಾರಾಯಣ ಮಹಾಯಜ್ಞದ ಭಿತ್ತಿಪತ್ರವನ್ನ ಶ್ರೀದತ್ತವಿಜಯಾನಂದ ಸ್ವಾಮೀಜಿ ಮತ್ತು ಶಾಸಕ ಟಿಎಸ್ ಶ್ರೀವತ್ಸ ಅವರು ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ ಆವರಣದಲ್ಲಿ ಬಿಡುಗಡೆ ಮಾಡಿದರು.
ಈ ಸಂಧರ್ಭದಲ್ಲಿ ಗಣಪತಿ ಶ್ರೀಗಳು ಮಾತನಾಡಿ ಹನುಮಾನ್ ಚಾಲೀಸ ಪಠಣದಿಂದ ಮನುಷ್ಯನ ಆಯಸ್ಸು ಆರೋಗ್ಯ ವೃದ್ಧಿಸುವ ಜೊತೆಯಲ್ಲೆ ಆಂಜನೇಯನ ಶಕ್ತಿಯಿಂದ ಇಡೀ ಭೂಮಂಡಲವೇ ರಕ್ಷಣೆಯಾಗುತ್ತಿದೆ ಎಂದು ಹೇಳಿದರು.
ರಾಮ ಸೀತೆಯನ್ನು ಒಂದು ಮಾಡಿದ ಹನುಮ ಶಕ್ತಿ ಅಪಾರವಾದುದು, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಫಬ್ರವರಿ 14ರಂದು ಲಕ್ಷಾಂತರ ಮಂದಿಯಿಂದ ಶ್ರೀ ಹನುಮಾನ್ ಚಾಲೀಸ ಪಾರಾಯಣ ಮಹಾಯಜ್ಞ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸದ್ಭಕ್ತರು ಪಾಲ್ಗೊಳ್ಳಿ ಎಂದು ಕರೆ ನೀಡಿದರು.
ಪ್ರತಿಯೊಬ್ಬರಿಗೂ ಅನ್ನಪ್ರಸಾದ ಹನುಮರಕ್ಷೆಯನ್ನ ನೀಡಲಿದ್ದು ಮೈಸೂರಿನ ಆಸ್ಥಿಕ ಬಂಧುಗಳು ಭಾಗವಹಿಸಿ ಯಶಸ್ವಿಗೊಳಿಸಿ ಎಂದು ಶ್ರೀಗಳು ತಿಳಿಸಿದರು.
ಶ್ರೀದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಯವರು ಮಾತನಾಡಿ ವಿಶ್ವೆದೆಲ್ಲೆಡೆ ಆಂಜನೇಯನ ಮೂರ್ತಿ ಆಶ್ರಮಗಳನ್ನು ಭಕ್ತವೃಂದ ಸ್ಥಾಪಿಸಿದ್ದಾರೆ, ಆದರೂ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರಿಗೆ
ಮೈಸೂರಿನ ಬಗ್ಗೆ ಅಪಾರವಾದ ಭಕ್ತಿ ಅಭಿಮಾನವಿದೆ. ಎಂದರೆ ಗುರುಗಳ ತಾಯಿಯವರ ಆಸೆಯಂತೆ ಮೈಸೂರಿನಲ್ಲಿಯೇ ಕಾರ್ಯಸಿದ್ಧಿ ಆಂಜನೇಯನ ಶಕ್ತಿ ಕೇಂದ್ರ ಸ್ಥಾಪಿಸಿ, ಮೈಸೂರಿನ ಆಸ್ಥಿಕ ಬಂಧುಗಳೊಂದಿಗೆ ಜಾತಿಭೇದವಿಲ್ಲದೆ ಧಾರ್ಮಿಕ ಚಟುವಟಿಕೆಗಳನ್ನ ನಿರಂತರವಾಗಿ ಆಯೋಜಿಸಬೇಕು ಎನ್ನುವುದು ಎಂದು ತಿಳಿಸಿದರು.
ಹನುಮಾನ್ ಚಾಲೀಸ ಪಾರಾಯಣದಲ್ಲಿ ಗಿನ್ನೀಸ್ ದಾಖಲೆಯೂ ಆಗಿದೆ, ಪ್ರತಿಯೊಬ್ಬರು ಮನೆ,ಮನೆಯಲ್ಲಿ ಹನುಮಾನ್ ಚಾಲೀಸ ಪಾರಾಯಣ ಮಾಡಿ ನಂತರ 14ನೇ ತಾರೀಖು ಸಾಮೂಹಿಕವಾಗಿ ಪಠಸಿ ಭಗವಂತ ಕೃಪೆಗೆ ಪಾತ್ರರಾಗಬಹುದು ಎಂದು ಹೇಳಿದರು.
ಶಾಸಕ ಟಿಎಸ್. ಶ್ರೀವತ್ಸ ಅವರು ಮಾತನಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಹನುಮಾನ್ ಚಾಲೀಸ ಪಾರಾಯಣ ಮತ್ತು ವಿದೇಶದಲ್ಲೂ ಸಹ ಕಾರ್ಯಸಿದ್ಧಿ ಆಂಜನೇಯ ಭವ್ಯ ಮೂರ್ತಿಯನ್ನು ಸ್ಥಾಪಿಸುವ ಮೂಲಕ ಹಿಂದೂ ಧರ್ಮದ ಶಕ್ತಿಯನ್ನ ವ್ಯಾಪಕವಾಗಿ ಪ್ರಚುರಪಡಿಸಿದ್ದಾರೆ ಎಂದು ತಿಳಿಸಿದರು.
ಮೈಸೂರಿನ ನಾಗರೀಕರಿಗೆ ಕೋವಿಡ್ ಸಂಕಷ್ಟ ಕಾಲದಲ್ಲೂ ಸಹ ಪ್ರತಿದಿನ 10 ಸಾವಿರ ಆಹಾರ ಪೊಟ್ಟಣಗಳು ಮತ್ತು ಆರೋಗ್ಯ ರಕ್ಷಾ ಸಾಮಗ್ರಿಗಳನ್ನ ವಿತರಿಸಿ ನೆರವಾಗಿದ್ದಾರೆ, ಮೈಸೂರಿನ ಪೌರಕಾರ್ಮಿಕ ಕಾಲೋನಿಯಲ್ಲಿ 16 ದೇವಸ್ಥಾನಗಳ ಜೀರ್ಣೋದ್ದಾರ ಮಾಡಿ ಪೌರಕಾರ್ಮಿಕರಿಗೂ ಧಾರ್ಮಿಕ ಚಟುವಟಿಕೆ ಪೂಜಾ ಕ್ರಮಗಳನ್ನ ತಿಳಿಸಿಕೊಟ್ಟು ಸಾಮಾಜಿಕ ಸಮಾನತೆಯ ಸಂದೇಶ ಸಾರಿದ್ದಾರೆ ಎಂದು ಕೊಂಡಾಡಿದರು.
ಮೈಸೂರಿನ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಹನುಮಾನ್ ಚಾಲೀಸ ಪಾರಾಯಣ ಮಹಾಯಜ್ಞದಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಎನ್ ಎಂ ನವೀನ್ ಕುಮಾರ್,
ಕೆ ಆರ್ ಸತ್ಯನಾರಾಯಣ, ನಜರ್ಬಾದ್ ನಟರಾಜ್, ಜೀವದಾರ ಗಿರೀಶ್, ವಿಕಾಸ್ ಶಾಸ್ತ್ರಿ, ಅಜಯ್ ಶಾಸ್ತ್ರಿ, ವಿಕ್ರಂ ಅಯ್ಯಂಗಾರ್, ರಾಕೇಶ್ ಭಟ್, ಡಾಕ್ಟರ್ ಲಕ್ಷ್ಮಿ, ಜಗದೀಶ್, ಪ್ರಕಾಶ್ ಪ್ರಿಯದರ್ಶನ್, ರಂಗನಾಥ್, ಜಯಸಿಂಹ, ಜತ್ತಿ ಪ್ರಸಾದ್, ಎಸ್ ಎನ್ ರಾಜೇಶ್, ಮಹೇಶ್ ಕಾಮತ್, ಮತ್ತಿತರರು ಹಾಜರಿದ್ದರು.
