ಮೈಸೂರು: ವಿಜಯದಶಮಿ ಪ್ರಯುಕ್ತ ಮೈಸೂರಿನ ಅಗ್ರಹಾರ ನವಗ್ರಹ ದೇವಸ್ಥಾನದ ಆವರಣದಲ್ಲಿರುವ ಶ್ರೀ ಪಾರ್ವತಿ ದೇವಿಗೆ ವಿಶೇಷ ಅಲಂಕಾರ ಮಾಡಿ ಮಹಾ ಪೂಜೆ ನೆರವೇರಿಸಲಾಯಿತು.
ತಾಯಿ ಪಾರ್ವತಿ ಗಿಳಿಹಸಿರು ಬಣ್ಣದ ಸೀರೆ ಉಟ್ಟು ಗಾಜಿನ ಬಳೆಗಳು ಮತ್ತು ಆನಬರಣಗಳಿಂದ ಅಲಂಕೃತಗೊಂಡು ಎಲ್ಲರನ್ನೂ ಆಶೀರ್ವದಿಸಿದ್ದಾಳೆ.
ತಾಯಿ ಪಾರ್ವತಿ ದೇವಿಯನ್ನು ದೇವಾಲಯದ ಪ್ರಧಾನ ಅರ್ಚಕ ಎಸ್ ಯೋಗಾನಂದ ಅವರ ಪತ್ರ ಅಭಿನಂದನ್ ಅವರು ಸಿಂಗರಿಸಿ,ಮಹಾಪೂಜೆ ನೆರವೇರಿಸಿದರು.
ವಿವಿಧ ಹೂಗಳು,ಚಿನ್ನಬೆಳ್ಳಿ ಆಭರಣಗಳು,ಕೈಕಾಲುಗಳನ್ನು ಧರಿಸಿ,ತ್ರಿಶೂಲಧಾರಿಯಾಗಿ ವಿಶೇಷವಾಗಿ ಅಲಂಕರಿಸಿ ರಾತ್ರಿ ಮಹಾಪೂಜೆ ಮತ್ತು ಮಹಾಮಂಗಳಾರತಿ ಮಾಡಿ ನಂತರ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
