ಮೈಸೂರು: ಜಿಲ್ಲೆಯ ದಕ್ಷಿಣಕಾಶಿ ನಂಜನಗೂಡಿನಲ್ಲೇ ಕಪಿಲೆ ಹರಿದರೂ ಇಲ್ಲಿನ
ಜನತೆಗೆ ಕುಡಿಯುವ ನೀರಿನ ಸಂಕಷ್ಟ ತಪ್ಪಿಲ್ಲ.
ಕಳೆದ ವರ್ಷ ಸಾಕಷ್ಟು ಮಳೆ ಬಂದು ಕಪಿಲಾ ಮೈದುಂಬಿ ಹರಿದಿದ್ದಳು.ಆದರೆ ಈಗ
ಮುಂಗಾರು ಕೈಕೊಟ್ಟ ಹಿನ್ನಲೆಯಲ್ಲಿ ಕಪಿಲೆಯ ಒಡಲು ಬರಿದಾಗುತ್ತಿದೆ.ಹಾಗಾಗಿ ಇಲ್ಲಿನ ಜನರಿಗೆ ಕುಡಿಯುವ ನೀರಿಗೆ ಬರ ಎದುರಾಗಿದೆ.
ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಪಂಪ್ ಹೌಸ್ ನಲ್ಲಿ ನೀರು ತಳಮಟ್ಟಕ್ಕೆ ಕುಸಿದಿದೆ.
ಹಾಗಾಗಿ ನಗರಸಭೆ ಅಧಿಕಾರಿಗಳು ಕುಡಿಯುವ ನೀರು ಸರಬರಾಜು ಸ್ಥಗಿತವಾಗಲಿದೆ ಎಂಬುದಾಗಿ ಫೋಟೋಗಳ ಸಮೇತ ವಾಟ್ಸಾಪ್ ಸಂದೇಶ ರವಾನಿಸಿದ್ದಾರೆ.
ಈಗಾಗಲೇ ನಂಜನಗೂಡಿನಾದ್ಯಂತ ಅಪರಾಧ ಕೃತ್ಯಗಳಿಂದ ಬೇಸತ್ತ ಜನತೆಗೆ ಕುಡಿಯುವ ನೀರಿನ ಅಭಾವದಿಂದ ದಿಕ್ಕೆಟ್ಟಂತಾಗಿದ್ದಾರೆ.
ನಂಜನಗೂಡು ನಿವಾಸಿಗಳ ನೀರಿನ ಕೊರತೆ ನಿವಾರಿಸಲು ವರುಣ ಕೃಪೆ ತೋರಿಯಾನೊ,ಅಧಿಕಾರಿಗಳು ಕುಡಿಯುವ ನೀರು ಸರಬರಾಜು ಮಾಡಲು ಏನು ಕ್ರಮ ಕೈಗೊಳ್ಳುವರೊ ಕಾದು ನೋಡಬೇಕಿದೆ
