ಮೈಸೂರು: ಕೃಷ್ಣಮೂರ್ತಿಪುರಂ ಶ್ರೀ ರಾಮಮಂದಿರದಲ್ಲಿ ಶ್ರೀವೀರಾಂಜನೇಯ ಮಹಾಸಂಸ್ಥಾನಮ್ ಬಂಗಾರಮಕಿ ಪೀಠಾಧಿಪತಿ ಶ್ರೀ ಮಾರುತಿ ಗುರೂಜಿ ರವರ ಸಾನಿಧ್ಯದಲ್ಲಿ ನಡೆಯುತ್ತಿರುವ ಶ್ರೀರಾಮತಾರಕ ಹೋಮ ಮತ್ತು ಸಿಂಧೂರ ಅರ್ಚನೆ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು.
ಈ ಕಾರ್ಯಕ್ರಮದಲ್ಲಿ ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶ್ ಗೌಡ ಅವರು ಭಾಗವಹಿಸಿ ಆಶೀರ್ವಾದ ಪಡೆದುಕೊಂಡರು.
ಯಂತ್ರೋದ್ದಾರಕ ವೀರಾಂಜನೇಯನ ಅಷ್ಟೋತ್ತರದೊಂದಿಗೆ ಕುಂಕುಮ ಸಿಂಧೂರ ಅರ್ಚನೆಯಲ್ಲಿ 250 ದಂಪತಿಗಳು ಭಾಗವಹಿಸಿದ್ದರು. ನಂತರ ಮಾರುತಿ ಗುರೂಜಿ ಅವರಿಂದ ಸಂಸ್ಥಾನ ಪೂಜೆ ಹಾಗೂ ಭಕ್ತರಿಗೆ ಫಲಮಂತ್ರಾಕ್ಷತೆ ಪ್ರಸಾದ ವಿನಿಯೋಗ ಮಾಡಲಾಯಿತು.
ಈ ವೇಳೆ ಶಾಸಕ ಕೆ.ಹರೀಶ್ ಗೌಡ ಅವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಆಧ್ಯಾತ್ಮಿಕ ಧಾರ್ಮಿಕ ಚಟುವಟಿಕೆಗಳ ಸಿದ್ಧಿಸಾಧನದಿಂದ ಗುರಿ ತಲುಪಲು ಯುವ ಜನಾಂಗ ಮುಂದಾಗುತ್ತಿರುವುದು ಸಮಾಜದಲ್ಲಿ ಸಂಸ್ಕಾರ ಸಂಸ್ಕೃತಿ ಉಳಿಸುವಲ್ಲಿ ಒಳ್ಳೆಯ ಬೆಳವಣಿಗೆಯಾಗಿದೆ ಇದರಿಂದ ಆರೋಗ್ಯವು ವೃದ್ಧಿಸುತ್ತದೆ ಎಂದು ಹೇಳಿದರು.
ಹೊನ್ನಾವರದಲ್ಲಿರುವ ಬಂಗಾರಮಕಿ ವೀರಾಂಜನೇಯ ಸನ್ನಿಧಿಗೆ ಅಂತರಾಷ್ಟ್ರೀಯ ಕ್ರಿಕೇಟ್ ಆಟಗಾರರು ಸಹ ಆಗಮಿಸಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂಬುದು ಖುಷಿಯಾಯಿತು, ನಮ್ಮ ಚಾಮರಾಜ ಕ್ಷೇತ್ರದಲ್ಲೂ ಸಹ ಅತಿಹೆಚ್ಚಿನ ಸಂಖ್ಯೆಯಲ್ಲಿ ಪುರಾತನ ಶ್ರೀರಾಮಮಂದಿರವಿದೆ ಮುಂದಿನ ದಿನದಲ್ಲಿ ಶ್ರೀರಾಮನ ವೀರಾಂಜನೇಯನ ಸನ್ನಿಧಿಯನ್ನ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಒಗ್ಗೂಡಿಸುವ ಯೋಜನೆ ರೂಪಿಸಲಾಗುವುದು ಎಂದು ಶಾಸಕರು ತಿಳಿಸಿದರು.
ಸಂಚಾಲಕರಾದ ಮನು.ವಿ, ಪ್ರದೀಪ್ ಗೌಡ, ಅಜಯ್ ಶಾಸ್ತ್ರಿ, ವಿಕ್ರಂ ಅಯ್ಯಂಗಾರ್, ಶ್ರೀನಿವಾಸ್,ಕಡಕೊಳ ಜಗದೀಶ್, ಶ್ರೀಕಾಂತ್ ಚೆನ್ನಿಗ, ಎಸ್. ಎನ್ ರಾಜೇಶ್, ನವೀನ್, ರಂಗನಾಥ್, ಅಮಿತ್,ಮತ್ತಿತರರು ಈ ವೇಳೆ ಹಾಜರಿದ್ದರು.
