ಡಾಲಿ ಧನಂಜಯ ಅವರ ಮತ್ತೊಂದು ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.
ಡಾಲಿ ಅವರು ನಾಯಕ ನಟ ಅಷ್ಟೇ ಅಲ್ಲ ನಿರ್ಮಾಪಕರಾಗಿಯೂ ಯಶಸ್ವಿಯಾಗಿದ್ದಾರೆ.
ಡಾಲಿ ಪಿಕ್ಚರ್ಸ್ ಮೂಲಕ ಹಲವು ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುತ್ತಿದ್ದಾರೆ.
ಇತ್ತೀಚೆಗಷ್ಟೆ ‘ಹೆಗ್ಗಣ ಮುದ್ದು’ ಹೆಸರಿನ ಹೊಸ ಸಿನಿಮಾ ಘೋಷಿಸಿದ ಡಾಲಿ,ಈಗ ತಮ್ಮದೇ ನಿರ್ಮಾಣದ ಮತ್ತೊಂದು ಚಿತ್ರದ ಬಿಡುಗಡೆಗೆ ಮುಂದಾಗಿದ್ದಾರೆ,ದಿನಾಂಕಾನೂ ಘೋಷಿಸಿದ್ದಾರೆ.
ಇದು ಜೈಲಿನ ಕರಾಳ ಕತೆಯನ್ನೊಳಗೊಂಡ
ಜೆಸಿ ದಿ ಯೂನಿವರ್ಸಿಟಿ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು ಸದ್ದು ಮಾಡುತ್ತಿದೆ.
ಜೆಸಿ ಸಿನಿಮಾ ಫೆಬ್ರವರಿ 6ಕ್ಕೆ ಅದ್ದೂರಿಯಾಗಿ ತೆರೆಗೆ ಬರಲಿದೆ. ಸೂರ್ಯ ಪ್ರಖ್ಯಾತ್ ಮತ್ತು ಭಾವನಾ ರೆಡ್ಡಿ ಅವರು ‘ಜೆಸಿ’ ಸಿನಿಮಾನಲ್ಲಿ ನಟಿಸಿದ್ದಾರೆ,ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ನಿರ್ದೇಶಕ ಪ್ರೇಮ್ ಸಿನಿಮಾದ ಟ್ರೈಲರ್ ಅನ್ನು ಬಿಡುಗಡೆ ಮಾಡಿ, ಸಿನಿಮಾ ತಂಡಕ್ಕೆ ಶುಭ ಹಾರೈಸಿದ್ದಾರೆ.
ಜೈಲಿನ ಸುತ್ತ ನಡೆಯುವ ಕಥೆ ಒಳಗೊಂಡಿದೆ, ಚೇತನ್ ಜೈರಾಮ್ ಅವರು ‘ಜೆಸಿ’ ಸಿನಿಮಾ ನಿರ್ದೇಶಿಸಿದ್ದು, ಇದು ಅವರ ಮೊದಲ ನಿರ್ದೇಶನದ ಸಿನಿಮಾ. ಜೈಲು ಒಳಗಿನ ಅವ್ಯವಹಾರ, ಕೈದಿಗಳ ದರ್ಬಾರ್, ಕೈದಿಗಳ ಮಾನವೀಯತೆ, ಅಮಾನವೀಯತೆ ಇನ್ನಿತರೆ ಅಂಶಗಳಿವೆ,ಫೈಟ್, ಕೊಲೆ, ರಕ್ತ, ಹಿಂಸೆಗಳ ನಡುವೆ ಅಪ್ಪ ಮಗನ ಸೆಂಟಿಮೆಂಟ್ ಕೂಡಾ ಇದೆ.
ಶಿವಣ್ಣ ಟ್ರೈಲರ್ ನೋಡಿ ತುಂಬಾ ಖುಷಿ ಪಟ್ಟಿದ್ದಾರೆ ಜೈಲ್ ಒಂದು ಪರಿವರ್ತನೆಯ ಜಾಗ, ಜೈಲಿಗೆ ಹೋಗಿ ಬಂದವರು ಅನೇಕರು ಬದಲಾಗುತ್ತಾರೆ ಎಂದು ಹೇಳಿದ್ದಾರೆ.
ಭವಿಷ್ಯದ ಸ್ಟಾರ್ ಆಗುವ ಎಲ್ಲಾ ಕ್ವಾಲಿಟಿಗಳು ಪ್ರಖ್ಯಾತ್ ಅವರಲ್ಲಿ ಇದೆ. ತುಂಬಾ ಚೆನ್ನಾಗಿ ಆಕ್ಟ್ ಮಾಡಿದ್ದಾರೆ,ನೋಡೋಕೂ ಸ್ಮಾರ್ಟ್ ಆಗಿದ್ದಾರೆ ಎಂದು ಶಿವಣ್ಣ ಬೆನ್ನು ತಟ್ಟಿದ್ದಾರೆ.
ಪ್ರೇಮ್ ಮಾತನಾಡಿ,ಯಾರಿಗೂ ಜೈಲಿನ ಅನುಭವ ಬೇಡ, ಅಲ್ಲಿ ದುಡ್ಡು ಇರೋನಿಗೆ ಮಾತ್ರ ಬೆಲೆ, ಎಷ್ಟೋ ಜನರಿಗೆ ಬೇಲ್ ಸಿಕ್ಕಿದ್ರು ಬಿಡಿಸಿಕೊಳ್ಳಲು ಆಗಲ್ಲ ಅಂತಹಾ ಸ್ಥಿತಿಯಲ್ಲಿದ್ದಾರೆ’ ಎಂದು ವಿಷಾದಿಸಿದರು.
