ಬಾಂಗ್ಲಾದೇಶ: ಬಾಂಗ್ಲಾದೇಶದಲ್ಲಿ ಹಿಂದೂಗಳ ಸರಣಿ ಹತ್ಯೆ ಇನ್ನೂ ಮುಂದುವರಿದಿದ್ದು,ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಶುಕ್ರವಾರ ಹಿಂದೂ ಪೆಟ್ರೋಲ್ ಬಂಕ್ ಸಿಬ್ಬಂದಿಯನ್ನು ಮುಸ್ಲಿಂ ರಾಜಕೀಯ ಮುಖಂಡ ಹತ್ಯೆ ಮಾಡಿದ್ದಾನೆ.
ಪೆಟ್ರೋಲ್ ಹಣ ಕೇಳಿದ್ದಕ್ಕೆ ಆಕ್ರೋಶದಿಂದ ಪೆಟ್ರೋಲ್ ಬಂಕ್ನ ಹಿಂದೂ ಸಿಬ್ಬಂದಿಯ ಮೇಲೆ ಕಾರು ಹತ್ತಿಸಿ ಕೊಲೆ ಮಾಡಿದ್ದಾನೆ.
ರಿಪನ್ ಸಹಾ (30)ಕೊಲೆಯಾದ ಸಿಬ್ಬಂದಿ ಎಂದು ಗುರುತಿಸಲಾಗಿದೆ. ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದರೂ ಮೊಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ಕೈಕಟ್ಟಿ ಕುಳಿತಿದ್ದು ತೀವ್ರ ಆಕ್ರೋಶಕ್ಕೆ ವ್ಯಕ್ತವಾಗಿದೆ.
ಸದರ್ ಉಪಝಿಲ್ಲಾ ಪೆಟ್ರೋಲ್ ಬಂಕ್ನ ಉದ್ಯೋಗಿಯಾಗಿದ್ದ ಸಹಾ ಮೇಲೆ ಶುಕ್ರವಾರ ಕಾರು ಹತ್ತಿಸಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.
ಸ್ಥಳೀಯ ನಾಯಕ ಅಬುಲ್ ಹಶೀಮ್ ಮತ್ತು ಆತನ ಚಾಲಕ ಕಮಲ್ ಹೊಸೈನ್ ಕೊಲೆ ಮಾಡಿದ್ದು,ಇಬ್ಬರನ್ನು ಬಂಧಿಸಲಾಗಿದೆ.
ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಮತ್ತು ಅದರ ವಿದ್ಯಾರ್ಥಿ ಘಟಕ ಜುಬೊ ದಳದ ಮಾಜಿ ನಾಯಕ ಅಬುಲ್ ಹಶೀಮ್ ಶುಕ್ರವಾರ ಪೆಟ್ರೋಲ್ ಬಂಕ್ಗೆ ಆಗಮಿಸಿ ಕಾರ್ ಗೆ ಪೆಟ್ರೋಲ್ ಹಾಕಿಸಿದ್ದಾನೆ. ಬಳಿಕ ಹಣ ಕೊಡದೆಯೇ ಹೋಗಲು ಯತ್ನಿಸಿದ್ದಾನೆ.
ಈ ವೇಳೆ ರಿಪನ್ ಸಹಾ ವಾಹನದ ಮುಂದೆ ಹೋಗಿ ಹಣ ಕೇಳಿದ್ದು ಹಶೀಮ್ ಈ ವೇಳೆ ಚಾಲಕ ಕಮಲ್ ಹೊಸೈನ್ಗೆ ಕಾರು ಚಲಾಯಿಸಲು ಸೂಚಿಸಿ ಸಹಾ ಮೇಲೆ ಹರಿಸಲು ಹೇಳಿದ್ದಾನೆ. ಇದರಿಂದ ಸಹಾ ಗಂಭೀರ ಗಾಯಗೊಂಡು ನೆಲಕ್ಕೆ ಉರುಳಿ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ.
