ಮೈಸೂರು: ಮೈಸೂರು ಜಿಲ್ಲಾ ಹಾಗೂ ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷರಾಗಿ ಬಿರಿ ಹುಂಡಿ ಬಸವಣ್ಣ ಅವರು ನೇಮಕವಾಗಿದ್ದಾರೆ.
ಜಿಲ್ಲಾ,ಗ್ರಾಮಾಂತರ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪದಗ್ರಹಣ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಬಿರಿ ಹುಂಡಿ ಬಸವಣ್ಣನವರು ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮೂಡ ಮಾಜಿ ಅಧ್ಯಕ್ಷ ಹೆಚ್. ವಿ ರಾಜೀವ್ ಅವರು ನೂತನ ಅಧ್ಯಕ್ಷರಿಗೆ ಶುಭ ಕೋರಿದರು.
ಈ ವೇಳೆ ಮೈಸೂರು ನಗರ ಕಾಂಗ್ರೆಸ್ ಕುಶಲಕರ್ಮಿ ವರ್ಗದ ಅಧ್ಯಕ್ಷ ಟಿಂಬರ್ ನಾಗರಾಜು, ರವಿತೇಜ, ಮಲ್ಲೇಶ್, ಕರಿಗೌಡ್ರು, ರಾಮ್ ಪ್ರಸಾದ್ ಮತ್ತಿತರರು ಹಾಜರಿದ್ದರು.
