ಮೈಸೂರು: ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಮಹಾರಾಜ ಕಾಲೇಜು ಮೈದಾನದಲ್ಲಿ ನಾಳೆ ನಡೆಯಲಿರುವ ಶ್ರೀ ಹನುಮಾನ್ ಚಾಲೀಸ ಪಾರಾಯಾಣ ಮಹಾಯಜ್ಞದ ಬೃಹತ್ ವೇದಿಕೆ ನಿರ್ಮಾಣ ಸೇರಿ ಸಕಲ ವ್ಯವಸ್ಥೆಗಳ ಬಗ್ಗೆ ಆಶ್ರಮದ ಭಕ್ತಾಧಿಗಳು ವೀಕ್ಷಿಸಿದರು.
ಈ ಸಂಧರ್ಭದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷರಾದ ಡಿ.ಟಿ.ಪ್ರಕಾಶ್ ಅವರು ಮಾತನಾಡಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಶ್ರೀಹನುಮಾನ್ ಚಾಲೀಸ ಪಾರಾಯಣ ಮಹಾಯಜ್ಞ ಮೈಸೂರಿಗೆ ಆಧ್ಯಾತ್ಮಿಕ ಶಕ್ತಿ ಕಳೆಕಟ್ಟಲಿದೆ, ಬೆಳಗ್ಗೆ ವಿಶೇಷ ಹೋಮಗಳು ನೆರವೇರುವುದು, ನಂತರ 9ಘಂಟೆಗೆ ಸರಿಯಾಗಿ ಸಾಮೂಹಿಕವಾಗಿ ಲಕ್ಷಕಂಠದಿಂದ ಶ್ರೀ ಹನುಮಾನ್ ಚಾಲೀಸ ಪಾರಾಯಣ ನೇರವೇರುವುದು ಎಂದು ತಿಳಿಸಿದರು.
ಹನುಮಾನ್ ಚಾಲೀಸ ಪಾರಾಯಣದಲ್ಲಿ ಸಮಸ್ಥ ಜನಾಂಗದವರು ಭಾಗವಹಿಸಿ ತಮ್ಮ ಜೀವನದ ಯಶಸ್ಸಿನ ಸಾಧನಗೆ ಉಪಯುಕ್ತವಾಗುತ್ತದೆ,ಎಲ್ಲಾ ಭಕ್ತಾಧಿಗಳಿಗೂ ಪ್ರವೇಶ ಉಚಿತವಾಗಿದ್ದು, ಹನುಮದ್ ರಕ್ಷೆ,ಅನ್ನಪ್ರಸಾದ ವಿತರಿಸಲಾಗುತ್ತದೆ, ಕುಡಿಯುವ ನೀರು ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ತುರ್ತು ವ್ಯವಸ್ಥೆಗಳನ್ನ ಮಾಡಲಾಗಿದೆ ಎಂದು ವಿವರಿಸಿದರು.
ಒಟ್ಟಾರೆ ಜೈ ಹನುಮಾನ್ ಎಂಬ ಘೋಷಣೆಯಿಂದ ಆಧ್ಯಾತ್ಮಿಕ ಶಕ್ತಿ ಸಂಚರಿಸಲಿದೆ ಇದರ ಅನುಭವ ಪಡೆದುಕೊಳ್ಳಿ ಎಂದು ಡಿ.ಟಿ ಪ್ರಕಾಶ್ ಸಲಹೆ ನೀಡಿದರು.
ಈ ಸಂಧರ್ಭದಲ್ಲಿ ಗಣಪತಿ ಸಚ್ಚಿದಾನಂದ ಆಶ್ರಮದ ಕಾರ್ಯದರ್ಶಿ ಹೆಚ್.ವಿ ಪ್ರಸಾದ್, ಟ್ರಸ್ಟಿ ರಾಜೇಂದ್ರ, ರಮೇಶ್, ಅಗಸ್ತ್ಯ ಸೊಸೈಟಿ ನಿರ್ದೇಶಕ ವಿಕ್ರಂ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ, ಆಧ್ಯಾತ್ಮಿಕ ವಿಶ್ಲೇಷಕ ವಿಕಾಸ್ ಶಾಸ್ತ್ರಿ, ಕೇಬಲ್ ಮಹೇಶ್, ವಿನಯ್ ಬಾಬು ಮತ್ತಿತರರು ಹಾಜರಿದ್ದರು.
