ಮೈಸೂರು: ಮೈಸೂರಿನ ಕೆಆರ್ ಕ್ಷೇತ್ರದ ಟಿ ಕೆ ಲೇಔಟ್ ನಾಲ್ಕನೇ ಕ್ರಾಸ್ ನಲ್ಲಿ ಸಿಲೆಂಡರ್ ಸ್ಫೋಟಗೊಂಡು ಹಾನಿಯಾಗಿರುವ ಮನೆಗೆ ಶಾಸಕ ಟಿ ಎಸ್ ಶ್ರೀವತ್ಸ ಹಾಗೂ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ಭೇಟಿ ನೀಡಿ ಪರಿಶೀಲಿಸಿದರು.
ನಿನ್ನೆ ಅಮೃತ್ ಅವರ ಮನೆಯಲ್ಲಿ ಸಿಲಿಂಡರ್ ಸ್ಪೋಟವಾಗಿತ್ತು.ವಿಷಯ ತಿಳಿಯುತ್ತಿದ್ದಂತೆ ಕೆ.ಆರ್ ಕ್ಷೇತ್ರದ ಶಾಸಕ ಶ್ರೀವತ್ಸ ಹಾಗೂ ಚಾಮರಾಜ ಕ್ಷೇತ್ರದ ಶಾಸಕ ಹರೀಶ್ ಗೌಡ ಬೇಟಿ ನೀಡಿ ಮನೆಯವರಿಗೆ ಸಮಾಧಾನ ಹೇಳಿ, ಜಿಲ್ಲಾಧಿಕಾರಿ ಹಾಗೂ ನಗರಪಾಲಿಕೆ ಆಯುಕ್ತರನ್ನು ಸ್ಥಳಕ್ಕೆ ಭೇಟಿ ಮಾಡಿಸುವುದಾಗಿ ತಿಳಿಸಿದ್ದರು.
ಅದರಂತೆ ಇಂದು ಶಾಸಕ ಶ್ರೀವತ್ಸ ಅವರೊಂದಿಗೆ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಹಾಗೂ ನಗರಪಾಲಿಕೆ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಈ ಅಗ್ನಿ ದುರಂತದಿಂದ ಹಾನಿಗೊಳಗಾದ ಮನೆಯನ್ನು ವೀಕ್ಷಿಸಿ ಚರ್ಚಿಸಿದರು.
ಅಮೃತ್ ಹಾಗೂ ಅವರ ಕುಟುಂಬದ ಸದಸ್ಯರಿಗೆ ಧೈರ್ಯ ಹೇಳಿ ಸರ್ಕಾರದಿಂದ ಯಾವ ರೀತಿಯ ಸಹಾಯ ಮಾಡಿಕೊಡಬಹುದೊ ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.
ಗ್ಯಾಸ್ ಕಂಪನಿ ಹಿರಿಯ ಅಧಿಕಾರಿಗಳು ಭೇಟಿ ನೀಡಲು ಸೂಚಿಸಿದರು.
ಈ ಸಂದರ್ಭದಲ್ಲಿ ನಗರಪಾಲಿಕೆ ಮಾಜಿ ಸದಸ್ಯರಾದ ಗೋಪಿ ಜಗದೀಶ್ ಹಾಗೂ ಬಿಜೆಪಿ ಅಧ್ಯಕ್ಷ ಗೋಪಾಲ ರಾಜೇ ಅರಸ್ ಮುಖಂಡರಾದ ಪೂರ್ಣಿಮಾ ಚಂದ್ರಪ್ಪ. ಕೆಂಚ ಮಧು, ಬಸವರಾಜು,ರಮೇಶ್ ಕಣ್ಣು,ಲೋಹಿತ್ ಶರ್ಮಾ, ಅರುಣ್ ಸ್ಥಳಿಯರು ಹಾಗೂ ವಲಯ ಕಚೇರಿ 3 ರ ಸಹಾಯಕ ಆಯುಕ್ತರಾದ ಸಂದೀಪ್ ಅಭಿವೃದ್ಧಿ ಅಧಿಕಾರಿ ಸತ್ಯಮೂರ್ತಿ ಕೂಡಾ ಹಾಜರಿದ್ದರು.
