ಮಂಡ್ಯ: ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ಪ್ರಥಮ ದರ್ಜೆ ಕಂಟ್ರಾಕ್ಟರ್ ಕಾವೇರಿ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದು
ಮನೆಯವರು ಮತ್ತು ಸ್ನೇಹಿತರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.
ಶ್ರೀರಂಗಪಟ್ಟಣದ ಹುಣಸನ ಹಳ್ಳಿಯ ಪವನ್ (27) ನಾಪತ್ತೆಯಾಗಿ ಈಗ ಶವವಾಗಿ ಪತ್ತೆಯಾದ ಕಂಟ್ರಾಕ್ಟರ್.
ಕೋಟ್ಯಾಂತರ ರೂ. ಮೌಲ್ಯದ ಕಾಮಗಾರಿ ನಡೆಸುತ್ತಿದ್ದ ಪವನ್ ನಾಪತ್ತೆಯಾಗಿದ್ದರು ಈಗ ನದಿಯಲ್ಲಿ ಅವರ ದೇಹ ಸಿಕ್ಕಿದೆ,ಇದು ಅನುಮಾನಗಳಿಗೆ ಎಡೆ ಮಾಡಿದೆ.
ದೇಹಗಳ ಮೇಲೆ ಗಾಯಗಳು ಕಂಡುಬಂದಿದೆ ಹಾಗಾಗಿ ಯಾರೊ
ಕೊಲೆ ಮಾಡಿರಬಹುದು ಎಂದು ಕುಟುಂಬಸ್ಥರು ದೂರಿದ್ದಾರೆ.
ಕೆಲಸ ಇದೆ ರಾತ್ರಿ ಮನೆಗೆ ಬರುವುದಿಲ್ಲ ಎಂದು ಹೇಳಿ 2 ನೇ ತಾರೀಖು ಮನೆಯಿಂದ ಹೋಗಿದ್ದ ಪವನ್ ಎರಡು ದಿನ ಕಳೆದರೂ ಮನೆಗೆ ಹಿಂದಿರುಗಿಲ್ಲ.
ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಸಾಮಾಜಿಕ ಜಾಲತಾಣದ ಖಾತೆಗಳು ಡಿ ಆಕ್ಟಿವ್ ಆಗಿತ್ತು.
ಇದರಿಂದ ಅನುಮಾನಗೊಂಡ ಕುಟುಂಬಸ್ಥರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈಗ ನದಿಯಲ್ಲಿ ಪವನ್ ಮೃತದೇಹ ಪತ್ತೆಯಾಗಿದೆ.
ಪವನ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮನೆಯವರು
ಶ್ರೀರಂಗಪಟ್ಟಣ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.
