ಮೈಸೂರು: ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ನುಡಿದಂತೆ ನಡೆದು ಮಾದರಿಯಾಗಿದ್ದಾರೆ ಎಂದು ಮೈಸೂರಿನ ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಬಸಪ್ಪ ತಿಳಿಸಿದ್ದಾರೆ.
ರಾಜಕೀಯ ಕ್ಷೇತ್ರ ಪಲ್ಲಟಗಳ ತಿರುವು ಏನೇ ಇರಲಿ, ಸಿಎಂ ಸಿದ್ದರಾಮಯ್ಯ ಅವರು ನಾಡಿಗೆ, ಸಾಮಾಜಿಕ ನ್ಯಾಯಕ್ಕೆ, ಸಿದ್ಧಾಂತಕ್ಕೆ ಬದ್ಧರಾಗಿ ಸೇವೆ ಸಲ್ಲಿಸಿದವರು ಎಂದರೆ ಹೇಳಿದ್ದಾರೆ.
ಇನ್ನೆರಡು ವರ್ಷ ಅವರ ಅಧಿಕಾರ ಅವಧಿ ರಾಜ್ಯಕ್ಕೆ ಅಗತ್ಯವಾಗಿತ್ತು. ಆದರೇ ತಾವು ನುಡಿದಂತೆ ನಡೆದು ವಚನ ಭ್ರಷ್ಟರಲ್ಲ ಅಂತ ಸಾಬೀತು ಪಡಿಸಿದ್ದಾರೆ.ಈ ಮೂಲಕ ರಾಜಕಾರಣದಲ್ಲಿ ಕೃತಿ- ಮಾತು ಒಂದಾಗಿರಬೇಕು ಎನ್ನುವ ಸಂದೇಶ ನೀಡಿದ್ದಾರೆ ಎಂದು ಬಸವರಾಜ ಬಸಪ್ಪ ತಿಳಿಸಿದ್ದಾರೆ.
ಪಕ್ಷದ ಹೈಕಮಾಂಡ್ ನಿರ್ದೇಶನಕ್ಕೆ ಗೌರವ ತೋರಿದ್ದಾರೆ. ಬಹುದೊಡ್ಡ ಜವಾಬ್ದಾರಿ ಡಿಸಿಎಂ ಡಿ.ಕೆ.ಶಿವಕುಮಾರ ಹೆಗಲೇರಿದೆ. ಪಕ್ಷದ ನಿರ್ಧಾರಕ್ಕೆ ಎಲ್ಲರು ತಲೆ ಭಾಗಿದ್ದೇವೆ. ಹಿಂದುಳಿದ ಸಮುದಾಯದ ಸಾಮಾಜಿಕ ಹರಿಕಾರನಿಗೆ ಎಂಟು
ವರ್ಷಗಳ ಕಾಲ ಅವಕಾಶ ನೀಡಿದ್ದು ಮರೆಯಲಾಗದು ಎಂದಿದ್ದಾರೆ.
ಜೊತೆಗೆ ಪಕ್ಷಕ್ಕಾಗಿ ದುಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಸಮಚಿತ್ತದ ಒಲವು ತೋರಿರುವುದು ಸ್ವಾಗತಾರ್ಹ ಹಿಂದುಳಿದ ನಾಯಕ ಸಿಎಂ ಸಿದ್ದರಾಮಯ್ಯ ನಾಡಿನ ಆಸ್ಥಿತ, ಸಿಎಂ ಹುದ್ದೆಯಿಂದ ಸಿದ್ದರಾಮಯ್ಯ ನಿರ್ಗಮನ ಬಹಳ ಬೇಸರ ಉಂಟು ಮಾಡಿದೆ ಎಂದು ಬಸವರಾಜ್ ಬಸಪ್ಪ ಪ್ರಕಟಣೆಯಲ್ಲಿ ಬೇಸರ ತೋಡಿಕೊಂಡಿದ್ದಾರೆ.
ಅವರ ಮಾರ್ಗದರ್ಶನ,ಅಹಿಂದ ಪರಿಕಲ್ಪನೆ ಸದಾ ನಾಡಿನಲ್ಲಿ ಇಮ್ಮಡಿಗೊಳ್ಳಬೇಕು. ಸಿಎಂ ಸಿದ್ದರಾಮಯ್ಯ ಅವರಂತಹ ನಾಯಕರು ಮತ್ತೆ ಬೇಕು, ಅದನ್ನು ಮೈಗೂಡಿಸಿಕೊಂಡು ನಾವೆಲ್ಲ ಸಾಗಬೇಕು. ರಾಜಕೀಯ ಪಲ್ಲಟಕ್ಕೆ ನಾವೆಲ್ಲ ಸಾಕ್ಷಿಬೂತರಾಗಿದ್ದೇವೆ ಹೊಸತನಕ್ಕೂ ಅಣಿಯಾಗಬೇಕಿದೆ ಎಂದು ಪ್ರಕಟನೆಯಲ್ಲಿ ಅವರು ತಿಳಿಸಿದ್ದಾರೆ.
