ಮೈಸೂರು: ತಮಿಳು ನಾಡಿನ ಚೆನ್ನೈನ
ಅಣ್ಣ ವಿಶ್ವವಿದ್ಯಾನಿಲಯದಲ್ಲಿ ನಡೆಯಲಿರುವ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಮೈಸೂರು ವಿವಿ ತಂಡಕ್ಕೆ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಇಬ್ಬರು ಆಯ್ಕೆಯಾಗಿದ್ದಾರೆ.
ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ
ವಿದ್ಯಾರ್ಥಿನಿಯರಾದ ಲಕ್ಷ್ಮಿ ಕೆ ಎಸ್ (ತೃತೀಯ ಬಿಎಸ್ ಸಿ) ,ಸ್ಪೂರ್ತಿ (ಪ್ರಥಮ ಬಿಸಿಎ) ಆಯ್ಕೆಯಾಗಿದ್ದಾರೆ.
ಈ ಪಂದ್ಯಾವಳಿಗೆ ನಮ್ಮ ಕಾಲೇಜಿನ ವಿದ್ಯಾರ್ಥಿನಿಯರು ಆಯ್ಕೆ ಆಗಿರುವುದು ಕಾಲೇಜಿಗೆ ಹಾಗೂ ಕ್ರೀಡಾ ವಿಭಾಗಕ್ಕೆ ಹಿರಿಮೆ ತಂದಿದೆ ಎಂದು ಪ್ರಾಂಶುಪಾಲರಾದ ಪ್ರೊ. ಅಬ್ದುಲ್ ರಹಿಮಾನ್ ಎಂ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರತಿಮ ಕೆ ಆರ್ ಮತ್ತು ಕ್ರೀಡಾ ಸಮಿತಿಯ ಸದಸ್ಯರು, ಕಾಲೇಜಿನ ಎಲ್ಲಾ ಅಧ್ಯಾಪಕರು, ಅಧ್ಯಾಪಕೇತರರು ಶುಭ ಹಾರೈಸಿದ್ದಾರೆ.
