ಚಾಮರಾಜನಗರ: ಸಂಜೀವಿನಿ ಕೆ.ಎಸ್.ಆರ್.ಎಲ್.ಪಿ.ಎಸ್ ಯೊಜನೆಯಡಿ
ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ವಿವಿಧ ಉತ್ಪನ್ನಗಳ ಲೋ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದೆ.
ಮಹಿಳಾ ಸ್ವ ಸಹಾಯ ಸಂಘದ ಗುಂಪುಗಳ ಸದಸ್ಯರು ಉತ್ಪಾದಿಸುತ್ತಿರುವ ವಿವಿಧ ಬಗೆಯ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಸೌಲಭ್ಯ ಕಲ್ಪಿಸಲು ಇಂದಿನಿಂದ ಮೂರು ದಿನಗಳ ಕಾಲ ಈ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಹಮ್ಮಿಕೊಳ್ಳಲಾಗಿದೆ.
ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು ತಯಾರಿಸಿದ ವಿವಿಧ ರೀತಿಯ ಉತ್ಪನ್ನಗಳಾದ ಜ್ಯೂಟ್ ಬ್ಯಾಗ್, ಯೋಗ ಮ್ಯಾಟ್, ಕೈಮಗ್ಗ ಸೀರೆಗಳು, ಸಿರಿಧಾನ್ಯ ಪೌಡರ್, ವನ-ಧನ ವಿಕಾಸ ಕೇಂದ್ರದ ಉತ್ಪನ್ನಗಳು, ಜೇನು ತುಪ್ಪ, ಗಾಣದ ಎಣ್ಣೆ, ವೈರ್ ಬುಟ್ಟಿ, ವಿವಿಧ ಬಗೆಯ ಉಪ್ಪಿನಕಾಯಿ, ಹಪ್ಪಳ, ಸಾಂಬಾರ್ ಪೌಡರ್, ಬಿದಿರಿನ ಉತ್ಪನ್ನಗಳು, ಅಲಂಕಾರಿಕ ಹೂವಿನ ಹಾರಗಳು, ಸಿಹಿ ತಿಂಡಿಗಳು, ಪಾಪ್ ಕಾರ್ನ್, ಪಾನಿಪುರಿ ಮತ್ತಿತರ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ.
