ಮೈಸೂರು: ಕೆ ಆರ್ ಕ್ಷೇತ್ರದಲ್ಲಿ 90 ಲಕ್ಷ ರೂಗಳ ಬಾಕ್ಸ್ ಡ್ರೈನ್ ಹಾಗೂ ರಸ್ತೆ ಕಾಮಗಾರಿಗೆ ಇಂದು ಚಾಲನೆ ನೀಡಲಾಯಿತು.
ನಗರ ಪಾಲಿಕೆ ಅನುದಾನದಡಿ ಕೆ.ಆರ್. ಕ್ಷೇತ್ರದ ವಲಯ ಕಚೇರಿ ಒಂದು ಎರಡು ಹಾಗೂ ಮೂರರ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂಬರ್ 52. 57.64.65 ರಲ್ಲಿ ಸುಮಾರು 90 ಲಕ್ಷ ರೂ ವೆಚ್ಚದ ಒಳಚರಂಡಿ ಬಾಕ್ಸ್ ಡ್ರೈನ್ ಮತ್ತು ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಟಿ ಎಸ್ ಶ್ರೀವತ್ಸ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಅಧ್ಯಕ್ಷ ಗೋಪಾಲ ರಾಜೇ ಅರಸ್, ನಗರ ಪಾಲಿಕೆ ಮಾಜಿ ಸದಸ್ಯರಾದ ಚಂಪಕ ಜಗದೀಶ್, ಗೀತಾಯೋಗನಂದ್, ಮುಖಂಡರಾದ ಪ್ರಸನ್ನ, ನವೀನ್, ಹೋಯ್ಸಳ,ಹರ್ಷ, ಪ್ರದೀಪ್ ಕುಮಾರ್,ರಾಜೇಶ್, ಹರೀಶ್, ಅಂಕಿತ್, ಮಂಜುನಾಥ್, ರವಿ, ಸತೀಶ, ಗಿರೀಶ್, ಮನೋಜ್, ಗಿರೀಶ್ ಗೌಡ, ಇ ಇ ಶ್ರೀನಿವಾಸಮೂರ್ತಿ, ಎ ಇ ಇ ಧನುಷ್ ಇಂಜಿನಿಯರ್ ಗಳಾದ ಪ್ರಶಾಂತ್, ಪ್ರಸನ್ನ, ಸೌಮ್ಯ, ದೀಪಕ್ ಮತ್ತಿತರರು ಹಾಜರಿದ್ದರು.
